Tuesday, July 5, 2011

A new column in Karmaveera with my illustrations

(Script: Shantala , Illustrations: Satish Sringeri)

ಪ್ರಣವ್ಗೆ `ಬಗ್' ಕಾಟ!


ತಾನು ಕಳ್ಳ ಪರರನ್ನ ನಂಬ.. ಇದು ಯುಪಿಎ ಸಕರ್ಾರಕ್ಕೆ ಅನ್ವಯಿಸೋ ಮಾತು ಎಂಬುದು ಕಠೋರ ಟೀಕೆಯಲ್ಲ ವಾಸ್ತವದ ಕಟು ಸತ್ಯ. ಇಲ್ಲದಿದ್ದರೆ ಕೇಂದ್ರ ಸಂಪುಟದ ಬೃಹಸ್ಪತಿಯ ಸ್ಥಾನದಲ್ಲಿರೋ ಹಣಕಾಸು ಸಚಿವ ಪ್ರಣವ್ ಮುಖಜರ್ಿಯವರ ಕಚೇರಿ ತುಂಬಾ ಕದ್ದಾಲಿಕೆ ಗುಂಡಿಗಳನ್ನು ಒತ್ತಿಡುತ್ತಿದ್ದರೇ?! ಈ ದೇಶದ ಕುಬೇರಪ್ಪನಾಗಿರುವ ವಿತ್ತ ಸಚಿವರ ಹಾಗೂ ಅವರ ಸಿಬ್ಬಂದಿಗಳ ಒಟ್ಟು ಐದು ಕಚೇರಿಗಳಲ್ಲಿ ಮೇಜುಗಳಿಗೆ ಅಂಟಿಸಲಾಗಿದ್ದ ಚ್ಯೂಯಿಂಗ್ ಗಮ್ಗಳೊಳಗೆ ಹುದುಗಿ ಕುಳಿತಿದ್ದ ಶ್ರವಣ ಸಾಧನಗಳು ಅಲ್ಲಿಂದ ಮಾಹಿತಿಗಳನ್ನು ಹೊರ ರವಾನಿಸುತ್ತಿದ್ದವೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲವಷ್ಟೆ.. ಹಣಕಾಸು ಸಚಿವಾಲಯದ ಆಗುಹೋಗುಗಳ ವಿವರಗಳು ಯಾರಿಗೆ ಬೇಕಾಗಿದೆ? ಯಾರು ಈ ಕದ್ದಾಲಿಕೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಮುಚ್ಚಿಹಾಕಲು ಗೃಹ ಸಚಿವ ಚಿದಂಬರಂ, ವಾತರ್ಾ ಸಚಿವೆ ಅಂಬಿಕಾ ಸೋನಿ ಆದಿಯಾಗಿ ಸಕರ್ಾರದವರು ಇದೇನೂ ಅಂತಹ ಮಹತ್ವದ ವಿಷಯವಲ್ಲ ಎಂದು ಹೇಳುತ್ತಿರುವುದಕ್ಕಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ. ಹಾಗಾದರೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಪ್ರಣವ್ ಮೇಲೆ ನಂಬಿಕೆ ಇಲ್ಲವೇ?
***********************************************************************************
ಕಲೈಂಜರ್ ಬಾಯಲ್ಲಿ ರಾಮನಾಮ!


`ರಾಮ'ನನ್ನ ರಹೀಮನ ಕುಲದವರು ದ್ವೇಷಿಸುತ್ತಾರೋ ಇಲ್ಲವೋ ಆದರೆ ನೆರೆ ರಾಜ್ಯ ತಮಿಳುನಾಡಿನ ಮಾಜಿಮುಖ್ಯಮಂತ್ರಿ ಹಾಗೂ ಈ ದೇಶದ ಸ್ವಯಂಘೋಷಿತ `ಪರಮ ನಾಸ್ತಿಕ' ಎಂದು ಸ್ವಯಂ ಘೋಷಿಸಿಕೊಂಡಿರುವ ಎಂ. ಕರುಣಾನಿಧಿಯವರಿಗೆ ಪುತ್ರಿ ಕನ್ನಿಮೋಳಿ ಕೃಷ್ಣ ಜನ್ಮಸ್ಥಾನದಲ್ಲಿರುವುದರಿಂದ ಆಲೋಚನಾಶಕ್ತಿ ಕೈಕೊಟ್ಟಿರುವ ಹಾಗೆ ಕಾಣುತ್ತೆ! ರಾಮಾಯಣ ಒಂದು ಸುಳ್ಳಿನ ಕಂತೆ, ರಾಮಸೇತು ಎಂದೆಂದೂ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ಇದುವರೆಗೂ ಬೊಬ್ಬೆ ಹೊಡೆಯುತ್ತಿದ್ದ ಕರುಣಾ ತಾತ, ಈಗ ಇದ್ದಕ್ಕಿದ್ದಂತೆ ತಮ್ಮನ್ನು ತಾವು ಮಯರ್ಾದಾ ಪುರುಷೋತ್ತಮ ಶ್ರೀರಾಮನಿಗೆ ಹೋಲಿಸಿಕೊಂಡಿರೋದು ನಿಜಕ್ಕೂ ಅವರ ಮೆದುಳಿನ ಸ್ಥಿತ್ಯಂತರದ ಸೂಚನೆ ಎಂಬುದು ವಿರೋಧಿಗಳ ಅಂಬೋಣ! ಇಷ್ಟಕ್ಕೂ ಈ ರಾಮ ಪ್ರಹಸನ ನಡೆದಿದ್ದು, ಡಿಎಂಕೆ ಕಾರ್ಯಕರ್ತರ ಇತ್ತೀಚಿನ ಬಹಿರಂಗ ಸಭೆಯಲ್ಲಿ ತಮ್ಮ ಇಂದಿನ ಸ್ಥಿತಿಯನ್ನು ಪ್ರಸ್ತಾಪಿಸಿದ ಕಲೈಂಜರ್, `ರಾಮ ವನವಾಸದಲ್ಲಿದ್ದಾಗಲೇ ತಾಟಕಿಯ ಸಂಹಾರವಾಗಿದ್ದು' ಎಂದು ತಮ್ಮ ಅಭಿಮಾನಿದೇವರುಗಳ ಕಣ್ಣೊರೆಸಿದರಂತೆ! ರಾಮ ಯಾರು, ತಾಟಕಿ ಯಾರು ಬಿಡಿಸಿ ಹೇಳಬೇಕಾಗಿಲ್ಲವಷ್ಟೇ..
****************************



ಅಷ್ಟಾಂಗಯೋಗ ವರ್ಸಸ್ ಕಪಾಲಬಾತಿ




ಇವರಿಬ್ಬರೂ ಪತಂಜಲಿ ಯೋಗ ಪರಂಪರೆಯ ಗೌರವಾನ್ವಿತ ಆಚಾರ್ಯರು. ಭಾರತೀಯ ಸಾಂಪ್ರದಾಯಿಕ ಯೋಗಶಾಸ್ತ್ರದ ಬಗ್ಗೆ ವಿಶ್ವದ ಮೂಲೆಮೂಲೆಯಲ್ಲೂ ಮಾಹಿತಿ, ಜಾಗೃತಿ, ತಿಳುವಳಿಕೆಗಳ ಪ್ರಸರಣದ ಜೊತೆಗೆ ಶಿಷ್ಯಮಂಡಲಿಗಳನ್ನು ಹೊಂದಿರುವ ಅಷ್ಟಾಂಗಯೋದ ಅಧ್ವಯರ್ು ಬಿ.ಕೆ.ಎಸ್. ಅಯ್ಯಂಗಾರ್ ಹಾಗೂ ಕಪಾಲಬಾತಿಯ ಕರ್ಮಠ ಬಾಬಾ ರಾಮದೇವ್ ನಡುವಿನ ಸಂಬಂಧ ಇನ್ನೂ ರಿಪೇರಿಯಾಗಿಲ್ಲವೆಂಬುದನ್ನು ಇತ್ತೀಚೆಗೆ ಚೀನದಲ್ಲಿ ಯೋಗಾಚಾರ್ಯರು ನೀಡಿರುವ ಹೇಳಿಕೆ ದೃಢಪಡಿಸಿದೆ. `ಕಪಾಲಬಾತಿಯ ಮಾರಾಟಗಾರರು ಪತಂಜಲಿ ಯೋಗದ ಮೂಲ ಉದ್ದೇಶಕ್ಕೆ ಕಂಟಕರಾಗಿದ್ದಾರೆ' ಎಂದು 93 ವರ್ಷದ ಯೋಗಗುರುಗಳು ಗುಡುಗಿದ್ದು ಯಾರ ಬಗ್ಗೆ ಎಂಬುದು ಸ್ವಯಂವೇದ್ಯ. `ಅವರು(ರಾಮದೇವ್) ಮೂಲ ಪತಂಜಲಿ ಯೋಗವನ್ನು ಕುಲಗೆಡಿಸುತ್ತಿದ್ದಾರೆ' ಎಂದು ಹತ್ತು ವರ್ಷಗಳ ಹಿಂದೆಯೇ ಬಹಿರಂಗವಾಗಿ ಹರಿಹಾಯ್ದಿದ್ದ ಗುರು ಅಯ್ಯಂಗಾರ್ಯರು ಇಂದಿಗೂ `ಕಪಾಲಬಾತಿ'ಯ ಪ್ರಸ್ತಾಪವಾದರೆ ಸಾಕು ಅಭಿನವ ಜಮದಗ್ನಿಯಾಗಿಬಿಡುತ್ತಾರೆ!
****************************************************************


ಕಾಯೋರೂ ಅವರೇ.. ಕಳ್ಳರೂ ಅವರೇ..



ಯಾವುದೇ ಹಗರಣ ನಡೆದಾಗ ಅದಕ್ಕೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗುವುದು, ಆ ಫೈಲುಗಳಿರುವ ಕಚೇರಿಯ ಪ್ರದೇಶದಲ್ಲಿ ಶಾಟರ್್ಸಕ್ಯರ್ೂಟ್ ಸಂಭವಿಸುವುದು ಇವೆಲ್ಲ ಮಾಮೂಲಿ ಘಟನೆಗಳೇ. ಕೆಲವರ್ಷಗಳ ಹಿಂದೆ ಕನರ್ಾಟಕ ರಾಜ್ಯ ಮಹಿಳಾ ಆಯೋಗದಲ್ಲಿ ಇಂಥ ಅಗ್ನಿ ಆಕಸ್ಮಿಕ ಉಂಟಾಗಿ ಪ್ರಸ್ತುತದ ಅಧಿಕಾರಸ್ಥ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದ ದಾಖಲೆಗಳು ಸುಟ್ಟು ಕರಕಲಾಗಿದ್ದರ ನೆನಪು ಮಾಸುವ ಮೊದಲೇ ಮಹಾರಾಷ್ಟ್ರದಲ್ಲೂ ಇಂಥದ್ದೇ ಇತಿಹಾಸ ಮರುಕಳಿಸಿದೆ. ಆ ರಾಜ್ಯದ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ರ ಪದತ್ಯಾಗಕ್ಕೆ ಕಾರಣವಾದ ಆದರ್ಶ ಹೌಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕಲೆಹಾಕಲಾಗಿದ್ದ ಫೈಲುಗಳೆಲ್ಲ ನಾಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಪಟ್ಟಭದ್ರರ ಹೆಸರನ್ನು ಶಾಶ್ವತವಾಗಿ ಅಳಿಸಿಹಾಕಲು ಅಗತ್ಯವಿರುವ ಕ್ರಮಗಳನ್ನೆಲ್ಲ ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದೆಯಂತೆ! ಆಡಳಿತಾರೂಢ ಸಕರ್ಾರಕ್ಕೆ ಸಂಬಂಧಿಸಿದ ಹಗರಣ ಇದಾಗಿರುವುದರಿಂದ `ಕಾಯೋರೂ ಅವರೇ.. ಕಳ್ಳರೂ ಅವರೇ'
**********************************************************************
ಕಾಮಿಕ್ಸ್ ನಾಯಕಿ ಮ್ಯಾಡೊನಾ 


ಮಕ್ಕಳ ಮನರಂಜನೆ ಮತ್ತು ಮಾಹಿತಿಗಾಗಿ ರೂಪುಗೊಂಡ ಕಾಮಿಕ್ಸ್ ಪುಸ್ತಕಗಳಲ್ಲಿ ಎಂಥ ಕತೆಗಳು, ಎಂಥವರ ಜೀವನಚರಿತ್ರೆಗಳು ಬಂದರೆ ಚೆನ್ನ? ಈ ಪ್ರಶ್ನೆಯ ಉತ್ತರಕ್ಕೆ ತಲೆಕೆಡಿಸಿಕೊಳ್ಳದೇ ಬ್ಲೂವಾಟರ್ ಸಂಸ್ಥೆಯು ಪಾಪ್ ತಾರೆ ಮ್ಯಾಡೊನಾಳ ಕತೆಯನ್ನ ಕಾಮಿಕ್ಸ್ ರೂಪದಲ್ಲಿ ಹೇಳಹೊರಟಿದೆ! ಮ್ಯಾಡೊನಾ ವಿಶ್ವದ ಅತ್ಯಂತ ಜನಪ್ರಿಯ ಗಾಯಕಿ ಇರಬಹುದು ಆದರೆ ಆದರ್ಶಪ್ರಾಯಳೇ? ಎಂದು ಕೇಳಿದರೆ ಇದೊಂದು ಸಿಲ್ಲಿ ಪ್ರಶ್ನೆ ಎನ್ನುವ ಬ್ಲೂವಾಟರ್, ವಿಶ್ವದ ಸತ್ವಶೀಲ ಮಹಿಳೆಯರನ್ನು ಚಿಣ್ಣರಿಗೆ ಪರಿಚಯಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಬ್ರಿಟನ್ನಿನ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್, ಅಮೆರಿಕದ ಗೌರವಾನ್ವಿತ ರಾಜಕಾರಣಿ ಸಾರಾ ಪಾಲಿನ್, ಅದೇ ದೇಶದ ಖ್ಯಾತ ಪತ್ರಕತರ್ೆ ಮತ್ತು ಲೇಖಕಿ ಬಾರ್ಬರಾ ವಾಲ್ಟರ್ಸ್ರ ಜೀವನ ಚರಿತ್ರೆಯನ್ನು ಕಾಮಿಕ್ಸ್ ರೂಪದಲ್ಲಿ ಪ್ರಕಟಿಸಿದ್ದೇವ ಎನ್ನುವ ಬ್ಲೂವಾಟರ್ಸ್, ಇದೀಗ ವಸ್ತ್ರ ದ್ವೇಷಿ ಗಾಯಕಿ ಮ್ಯಾಡೊನಾ ಕತೆಯನ್ನ ಚಿಣ್ಣರಿಗೆ ಹೇಳಹೊರಟಿದೆ. ಹಾಗಾದರೆ ಈ ಸರಣಿಯಲ್ಲಿ ಮುಂದಿನ ಹೆಸರು ಸಮಂತಾ ಫಾಕ್ಸ್, ಶಾರನ್ ಸ್ಟೋನ್ರದ್ದಾ?!!( COMICS IMAGE SOURCE: INTERNET)

ನೋ ಟಪ್ಪಾಂಗುಚ್ಚಿ ಡ್ಯಾನ್ಸ್!.....NEWSDIGEST....weekly column in Karmaveera

(Article: Shantala , Illustrations: Satish Sringeri)



ನೋ ಟಪ್ಪಾಂಗುಚ್ಚಿ ಡ್ಯಾನ್ಸ್!


ನ್ಯಾಯ, ನೀತಿಗಳ ಮೂತರ್ಿವೆತ್ತ ಸತ್ಯದೇವ ಮಂಜುನಾಥನ ಸನ್ನಿಧಿಯಲ್ಲಿ ಸಧ್ಯ ನಮ್ಮ ರಾಜ್ಯಸಕರ್ಾರದ `ರಾಕ್ಸ್ಟಾರ್' ರೇಣುಕಾಚಾರ್ಯ ಸಾಹೇಬರು ಟಪ್ಪಾಂಗುಚ್ಚಿ ಕುಣಿತ ಹಾಕದೆ `ಧರ್ಮ'ಸ್ಥಳದಲ್ಲಿ ಸಂಯಮ ಮೆರೆದಿದ್ದಾರೆ! ಬೀದರ್ನಿಂದ ಬೆಂಗಳೂರಿನ ವರೆಗೆ ಚಾನ್ಸ್ ಸಿಕ್ಕಾಗಲೆಲ್ಲ ಡ್ಯಾನ್ಸ್ ಮಾಡುವುದಕ್ಕೆ ರಾಜ್ಯಾದ್ಯಂತ ಸಚಿವ ರೇಣುಕಾಚಾರ್ಯ ಫೇಮಸ್ಸು. ಅದು ಟಪ್ಪಾಂಗುಚ್ಚಿ ಸ್ಟೆಪ್ಪೇ ಇರಬಹುದು ಅಥವಾ ಡೋಲು ಬಾಜಾ ನೆಗೆತವೇ ಇರಬಹುದು.. ಎಲ್ಲಕ್ಕೂ ಸೈ ಎನ್ನುವ ಅಬಕಾರಿ ಸಚಿವ ಮಹೋದಯರು ತಮ್ಮ ಅಧಿನಾಯಕ ಮುಖ್ಯಮಂತ್ರಿ ಯಡಿಯೂರಪ್ಪನವರ ಆಣೆ ಪ್ರಮಾಣ ಪ್ರಕರಣದ ಬೆಂಬಲಕ್ಕಾಗಿ ಅಣ್ಣಪ್ಪ ದೈವದ ನೆಲೆವೀಡಿಗೆ ಸಹೋದ್ಯೋಗಿಗಳೊಂದಿಗೆ ತೆರಳಿದಾಗ ದೊರೆತ ಪೂರ್ಣಕುಂಭ ಸ್ವಾಗತಕ್ಕೆ ಮನಸೋತು, ಭಾವುಕರಾಗಿ ಎಲ್ಲಿ ಟಪ್ಪಾಂಗುಚ್ಚಿ ಕುಣಿತ ಹಾಕಿಬಿಡುತ್ತಾರೋ ಎಂದು ಹೆದರಿದ್ದ ಅಧಿಕಾರಿ ಸಿಬ್ಬಂದಿಗಳು, ಸಾಹೇಬರು ತೀರಾ ಎಮೋಷನಲ್ ಆಗದೆ ನಾರ್ಮಲ್ ಆಗೇ ನಡಕೊಂಡಿದ್ದು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟರಂತೆ!! ********************************************************************************* -ಶಾಂತಲ