Tuesday, July 26, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera

 ( Script: Shantala, Illustrations: Satish Sringeri) 


ವಾರದ ಗುದ್ದು



ರಾಜ್ಯಸರ್ಕಾರ ಇಲ್ಲಿಯವರೆಗೆ ಅದೆಷ್ಟು ಸುಳ್ಳು ಪ್ರಮಾಣಪತ್ರಗಳನ್ನು ಕೊಟ್ಟಿದೆಯೋ! ಇವುಗಳನ್ನು ಆಧರಿಸಿ ನಾವು ಅದೆಷ್ಟು ತಪ್ಪು ಆದೇಶಗಳನ್ನು ನೀಡಿದ್ದೇವೋ ಆ ದೇವರಿಗೇ ಗೊತ್ತು!!
-ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಸ್. ಕೆಹರ್

***********************************************************************

ಹಿಮಾಲಯಕ್ಕೆ ನಿತ್ಯಾನಂದ ಯಾತ್ರೆ


ಸೊಂಟಲಿನಿ.. ಅಲ್ಲಲ್ಲ ಕುಂಡಲಿನಿ ಯೋಗದ ಸಾಕ್ಷಾತ್ಕಾರವಾದ ನಂತರ ಮತ್ತೆ ಇನ್ಯಾವ ಸಿದ್ಧಿಗಾಗಿ `ಶ್ರೀ' ನಿತ್ಯಾನಂದಸ್ವಾಮಿ ಹಿಮಾಲಯಕ್ಕೆ ಹೊರಟಿದ್ದಾರೋ ಗೊತ್ತಿಲ್ಲ! ಗುರುಪೂಣರ್ಿಮೆಯ ದಿನದಂದು ಬೆಂಗಳೂರಿನ ಬಿಡದಿ ಬಳಿಯ ಆಶ್ರಮದಲ್ಲಿ ತಮ್ಮ ಭಕ್ತಾದಿಗಳಿಗೆಲ್ಲ ಕುಂಡಲಿನಿಯ ಸಾಕ್ಷಾತ್ಕಾರಗೊಳಿಸಿ ಅವರೆನ್ನೆಲ್ಲ ಕಪ್ಪೆ ಕುಪ್ಪಳಿಸುವ ಕುಣಿತದ ಮೂಲಕ ಧನ್ಯರಾಗಿಸಿದ್ದು ಮಾಧ್ಯಮಗಳಲ್ಲೆಲ್ಲ ಬಿಸಿಬಿಸಿ ಸುದ್ದಿ-ಚಚರ್ೆಗಳಿಗೆ ಆಹಾರವಾಗುತ್ತಿದ್ದಂತೇ ಮಾನಸ ಸರೋವರ ಯಾತ್ರೆಯ ನೆಪದಲ್ಲಿ ನಿತ್ಯಾನಂದರು ಹಿಮಾಲಯದತ್ತ ಮುಖ ಮಾಡಿದ್ದಾರೆ. ಡಿಸೆಂಬರ್ನಲ್ಲಿ ಮಾನಸ ಸರೋವರದಿಂದ ಹಿಂತಿರುಗಿದಾಗ ಭಕ್ತಾದಿಗಳಿಗೆ ಸೊಂಟಲಿನಿ ಸ್ಸಾರಿ ಕುಂಡಲಿನಿ ಭಾಗ-2ರ ಸಾಕ್ಷಾತ್ಕಾರ ಮಾಡಿಸುತ್ತಾರೋ ಏನೋ ಕಾದು ನೋಡಬೇಕು!!
************************************************







ಪಿಜ್ಜಾ ಬರ್ಗರ್ ಔಟ್
ದಾಲ್ ರೋಟಿ ಇನ್



ಶಾಲಾಕಾಲೇಜುಗಳ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಪಿಜ್ಜಾ ಬರ್ಗರ್ ಹಾವಳಿ ವಿಪರೀತವಾಗಿರುವುದು ಕೊನೆಗೂ ಕೇಂದ್ರ ಸಕರ್ಾರದ ಗಮನಕ್ಕೆ ಬಂದಿದ್ದು ಈ ಜಂಕ್ಫುಡ್ ಮಾರಾಟಕ್ಕೆ(ವಿದ್ಯಾ ಸಂಸ್ಥೆಗಳ ಬಳಿ) ಕಡಿವಾಣ ಹಾಕಿ ಅವುಗಳ ಬದಲಿಗೆ  ದಾಲ್, ರೋಟಿ,(ಕರ್ನಾಟಕದಲ್ಲಿ ಬಹುಶಃ ರಾಗಿ ರೊಟ್ಟಿ, ಉಚ್ಚೆಳ್ಚಟ್ನಿ) ಮೊಳಕೆಕಾಳುಗಳಂಥ ಪೌಷ್ಠಿಕ ಆಹಾರ ಲಭ್ಯವಾಗುವಂತೆ ಕ್ರಮ ಕೈಗೊಳ್ಳವುದಾಗಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಈ ಮೇಲೆ ತಿಳಿಸಿದ್ದಷ್ಟೇ ಅಲ್ಲದೆ ಮತ್ಯಾವುದಾದರೂ ಪೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ಇದ್ದಲ್ಲಿ ಅದನ್ನು ದಯಮಾಡಿ ತಿಳಿಸಿ ಎಂದು ಸಕರ್ಾರ ಸಾರ್ವಜನಿಕರು, ಸಂಘಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿದೆ.












ತೀರಾ ಇತ್ತೀಚಿನ ವರೆಗೆ ಕೇಂದ್ರದಲ್ಲಿ ಸೂಪರ್ಫಾಸ್ಟ್ ರೈಲು ಬಿಡುತ್ತಿದ್ದ ಮಮತಕ್ಕ, ಈಗ ಅದೇ ಸ್ಪೀಡ್ನಲ್ಲಿ ತನ್ನ ತವರಲ್ಲಿ ಆಡಳಿತ ಸುಧಾರಣೆ ಶುರು ಮಾಡಿದ್ದಾರೆ. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವೆಸ್ಟ್ ಬೆಂಗಾಲ್ ಹೆಸರಿನಲ್ಲಿರುವ `ವೆಸ್ಟ್'ನ ಇತಿಹಾಸದ ಪುಟಗಳಿಗೆ ಸೇರಿಸಿ ನಮಗೆ `ಬೆಂಗಾಲ್' ಮಾತ್ರ ಸಾಕು ಎಂದು ಹೇಳಿ ವಿರೋಧಿ ಕಮ್ಯುನಿಸ್ಟರೂ ತಲೆಯಾಡಿಸುವಂತೆ ಮಾಡಿದ ದೀದಿ ಇದೀಗ ರಾತೋರಾತ್ರಿ ಗೂರ್ಖಾಗಳಿಗೆ ಸ್ವಾಯತ್ತ ಆಡಳಿತ ನಡೆಸಲು ಹೆಚ್ಚಿನ ಅಧಿಕಾರ ನೀಡಿ ರಾಜ್ಯಾದ್ಯಂತ `ಅಪ್ನಾ ಮೊಮ್ತಾದಿ(ಮಮತಾದೀದಿ) ಮಹಾನ್' ಆಗಿಬಿಟ್ಟಿದ್ದಾರೆ!








ದೋಸ್ತಿ ಎಲ್ಲಿಯವರೆಗೆ?





ಯೇ ದೋಸ್ತಿ ಹಮ್ ನಹೀ ಥೋಡೆಂಗೆ ಎನ್ನುತ್ತಾ ಗೆಳೆತನದ ಫೆವಿಕಾಲ್ ಅಂಟಿಸಿಕೊಂಡಿದ್ದ ಭಾರತೀಯ ಕ್ರಿಕೆಟ್ ತಂಡದ ಮಹೇಂದ್ರಸಿಂಗ್ ಧೋನಿ ಹಾಗೂ ಹರ್ಬಜನ್ಸಿಂಗ್ ಕೇವಲ ಒಂದು ಜಾಹಿರಾತಿನ ಕಾರಣದಿಂದಾಗಿ ನಾನೊಂದು ತೀರ ನೀನೊಂದು ತೀರ..ಆಗಿ ನಿಂತಿದ್ದಾರೆ. ಧೋನಿ ನೀಡುತ್ತಿರುವ ಮೆಕ್ಡೊವೆಲ್ನ ನಂ.1 ಪ್ಲಾಟಿನಂ ಸೋಡಾ ಜಾಹಿರಾತು ತಾವು ಪ್ರತಿನಿಧಿಸುತ್ತಿರುವ ರಾಯಲ್ಸ್ಟಾಗ್ ಜಾಹಿರಾತನ್ನು ಬಹಿರಂಗವಾಗಿ ಹೀಯಾಳಿಸಿದೆ ಎಂದು ಕ್ರಿಕೆಟ್ ತಂಡದ  ಮಿಸ್ಟರ್ ಕಿರಿಕ್ ಎಂದೇ ಜನಜನಿತರಾಗಿರುವ ಹರ್ಬಜನ್, ಕಿಂಗ್ಫಿಶರ್ ಸಂಸ್ಥೆಯ ವಿಜಯ್ ಮಲ್ಯ ಹಾಗೂ ಇತರರಿಗೆ ನೊಟೀಸು ಕೊಟ್ಟಿದ್ದಾರಂತೆ! ಭಜ್ಜಿ ಗೆಣೆಕಾರ ಧೋನಿಗೆ ನೇರವಾಗಿ ನೊಟೀಸು ನೀಡದಿದ್ದರೂ ಇದು ವೃತ್ತಿ ಮತ್ಸರದ ಇನ್ನೊಂದು ರೂಪ ಎನ್ನುತ್ತಾರೆ ಇವರಿಬ್ಬರ ಆಪ್ತಮಿತ್ರರು..





No comments:

Post a Comment