Sunday, July 17, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column( Karmaveera weekly)

( Script: Shantala, Illustrations: Satish Sringeri)

ವಾರದಗುದ್ದು!
`ರೈಲು ಅಪಘಾತದ ಸ್ಥಳಕ್ಕೆ ಈಗ ನಾನ್ಯಾಕೆ ಭೇಟಿ ನೀಡಬೇಕು? ನಾನೀಗ ರೈಲ್ವೆ ಸಚಿವನಲ್ಲ. ಆ ಖಾತೆ ಈಗ ಮನಮೋಹನ್ಸಿಂಗ್ರಿಗೆ ಸೇರಿದ್ದು'
-ಮುಕುಲ್ರಾಯ್, ಕೇಂದ್ರ ಬಂದರು ಖಾತೆ ರಾಜ್ಯ ಸಚಿವರು


*************************************************************************************************

ಸಾಲಗಾರರಾಗಿ ಪ್ರಶಸ್ತಿ ಗಳಿಸಿ!


ಬೆಸ್ಟ್ ಫೈನಾನ್ಸ್ ಮ್ಯಾನೆಜ್ಮೆಂಟ್ ಎಂದರೇನು? ಅಂತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅವಾಡರ್್ ಕೊಟ್ಟವರನ್ನು ಒಂದು ಕ್ಲಾರಿಫಿಕೇಷನ್ ಕೇಳೋದು ಒಳ್ಳೆಯದು. ಒಂದಲ್ಲ ಎರಡಲ್ಲ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಸಾಲದ ಪರ್ವತವನ್ನೇ ತಲೆ ಮೇಲೆ ಹೊತ್ತುಕೊಂಡಿರುವ ಬಿಬಿಎಂಪಿಯ ಯಾವ ವಿಭಾಗದಲ್ಲಿ ಹಣಕಾಸು ನಿರ್ವಹಣೆ ಅತ್ಯುತ್ತಮವಾಗಿದೆ ಎಂಬುದನ್ನು ಅಖಿಲಭಾರತ ಸ್ಥಳೀಯ ಆಡಳಿತ ಸಂಸ್ಥೆಯೇ ವಿವರಣೆ ನೀಡಿದರೆ ಸೂಕ್ತ. ಏಕೆಂದರೆ ಬಿಬಿಎಂಪಿಯ ತಲೆ ಮೇಲೆ ಅಮೋಘ 2923 ಕೋಟಿ ರೂಪಾಯಿಗಳ ಸಾಲದ ಶೂಲೆ ತೂಗುತ್ತಿದೆ! ವಸ್ತುಸ್ಥಿತಿ ಹೀಗಿರುವಾಗ ನಮಗೆ ನಗರ ರತ್ನ ಪ್ರಶಸ್ತಿ ಬಂದಿದ್ದಾರೂ ಹೇಗೆ ಎಂದು ಕೇವಲ ನಾಗರಿಕರಷ್ಟೇ ಅಲ್ಲ, ಸ್ವತಃ ಬಿಬಿಎಂಪಿ ಅಧಿಕಾರಿಗಳೇ ಗೊಂದಲದಲ್ಲಿದ್ದಾರಂತೆ! ಘನ ತ್ಯಾಜ್ಯ ನಿರ್ವಹಣೆಗೆ ಬಹುಶಃ ಪ್ರಶಸ್ತಿ ಬಂದಿದೆ ಎಂಬ ಅವರ ಲೆಕ್ಕಾಚಾರ ತಲೆಕೆಳಗಾಗಿದ್ದು ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ನೀಡುವ ವಿವರಣೆ ಕೇಳಿದಾಗ!

*************************************************************
ಎಚ್ಡಿಕೆ ಉಪವಾಸಕ್ಕೆ ರಿಲೀವರ್ ಸಿಗಲಿಲ್ಲವಂತೆ!


ಮುಖ್ಯಮಂತ್ರಿಗಳ ವಿರುದ್ಧ ರಣಧೀರ ಕಂಠೀರವನ ರೇಂಜ್ನಲ್ಲಿ ಹ್ಞೂಂಕರಿಸಿ, ಬಿಜೆಪಿ ಸಕರ್ಾರಕ್ಕೆ ಹೇಗಾದರೂ ಸರಿ ಒಮ್ಮೆ ಬುದ್ಧಿ ಕಲಿಸಿಯೇ ತೀರುತ್ತೇನೆ ಎಂಬ ಜೋಶ್ನಲ್ಲೇ ಉಪವಾಸ ಪ್ರಾರಂಭಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಂದೇ ದಿನಕ್ಕೆ ಸುಸ್ತೊಡೆದು, ಮಾರನೇ ದಿನವೇ ಮೂಸುಂಬಿ ರಸ ಸ್ವೀಕರಿಸಿದ್ದೇಕೆ? ರಾಜ್ಯದ ಐದು ಕೋಟಿ ಕನ್ನಡಿಗರನ್ನಷ್ಟೇ ಅಲ್ಲ ದೇಶದ ರಾಜಕಾರಣದ ಮೂಲೆಮೂಲೆಯಲ್ಲೂ ಕೇಳಿಬರುತ್ತಿರುವ ಪ್ರಶ್ನೆಯಿದು! ಕುಮಾರನ ಆರೋಗ್ಯಕ್ಕಿಂತ ಮುಖ್ಯವಾದದ್ದೇನೂ ಇಲ್ಲ. ಉಪವಾಸಕ್ಕೇನು ಬೇಕಾದರೆ ಪಕ್ಷದ ಹಿರಿಯ ನಾಯಕರು ಅದನ್ನು ಮುಂದುವರೆಸುತ್ತಾರೆ ಎಂದು ಮಾಜಿ ಪ್ರಧಾನಿಗಳು ಹುಕುಂ ಹೊರಡಿಸಿದ್ದೇ ಕುಮಾರ ಕಂಠೀರವ ಹಠಾತ್ ಆಗಿ ನಿರಶನ ಕೈಬಿಡಲು ಕಾರಣವಂತೆ! ಆರೋಗ್ಯ ಸರಿಯಿಲ್ಲದಿದ್ದಾಗ ಉಪವಾಸ ಬೇಡ ಎನ್ನುವುದೇನೋ ಸರಿ ಆದರೆ ತಮ್ಮ ಕುಟುಂಬದ ಮೇಲಿನ ಆರೋಪಗಳಿಗೆ ಜೆಡಿಎಸ್ನ ಇತರೆ ನಾಯಕರೇಕೆ ಉಪವಾಸ ಬೀಳಬೇಕು ಎನ್ನುವುದು ಬಹುಶಃ ಮಾಜಿ ಪ್ರಧಾನಿಗಳಿಗೆ ಹೊಳೆಯಲಿಲ್ಲವೋ ಗೊತ್ತಿಲ್ಲ! ಅದಕ್ಕೇ ಅಂದಿನ ಸಭೆಯಲ್ಲಿ ಗೌಡರ ಫಮರ್ಾನಿಗೆ ಸಿಂಧ್ಯ, ನಾಣಯ್ಯಾದಿ ಹಿರಿತಲೆಗಳಲ್ಲಿ ಯಾರೂ ಹ್ಞಾಂ, ಹ್ಞೂಂ ಅಂತನ್ನುವ ಗೋಜಿಗೇ ಹೋಗಲಿಲ್ಲವಂತೆ!
********************************************************
ಚಿದುಗೆ ಪ್ರಣವ್ ರಕ್ಷೆ



ಕೇಂದ್ರಸಕರ್ಾರದ ಬೃಹಸ್ಪತಿ ಪ್ರಣವ್ ಮುಖಜರ್ಿ ನೀಡುವ ಹೇಳಿಕೆ ಭಾರತದ ರಾಜಕಾರಣದ ದಿಕ್ಕನ್ನೇ ಬದಲಾಯಿಸಿ ಬಿಡುವಷ್ಟು ಶಕ್ತಿಶಾಲಿ! ಹಿಂದೆ:
1998ರ ಮಾಚರ್್ 5ರಂದು ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ "ಕಾಂಗ್ರೆಸ್ ಸಂಸದೀಯ ಪಕ್ಷಕ್ಕೆ(ಸಿಪಿಪಿ) ಯಾರು ಬೇಕಾದರೂ ಅಧ್ಯಕ್ಷರಾಗ ಬಹುದು; ಅವರು ಸಂಸತ್ ಸದಸ್ಯರಾಗೇ ಇರಬೇಕೆಂಬುದು ಕಡ್ಡಾಯವೇನಲ್ಲ" ಎಂದು ಪ್ರಣವ್ದಾ ನೀಡಿದ ಹೇಳಿಕೆ ಹಠಮಾರಿ ದಾದಾಜಿ ಸೀತಾರಾಂ ಕೇಸರಿ ನಿರ್ಗಮನ ಹಾಗೂ ಸೋನಿಯಾ ರಾಜಕೀಯ ಪ್ರವೇಶಕ್ಕೆ ನಾಂದಿಯಾಯಿತು(ಉಲ್ಲೇಖ: 24 ಅಕ್ಬರ್ ರೋಡ್-ಲೇ:ರಶೀದ್ ಕಿದ್ವಾಯಿ). ಈಗ:
`ಹಣಕಾಸು ಸಚಿವರು ದಿನಕ್ಕೆ ಬೇಕಾದಷ್ಟು ಮಂತ್ರಿಗಳನ್ನ ಭೇಟಿ ಮಾಡ್ತಾರೆ. ಈ ಎಲ್ಲ ವಿವರಗಳನ್ನೂ ದಾಖಲಿಸಲು ಸಾಧ್ಯವಿಲ್ಲ' ಎಂಬ ಪ್ರಣವ್ರ ಬೋಲ್ಡ್ ಹೇಳಿಕೆ ಸಂಪುಟದಲ್ಲಿನ ಅವರ ಕಡುವಿರೋಧಿಯಾಗಿರುವ ಗೃಹ ಸಚಿವ ಪಿ.ಚಿದಂಬರಮ್ಗೆ ಸದ್ಯ ಲೈಫ್ ನೀಡಿದೆ ಎಂಬುದು ಸುಳ್ಳಲ್ಲ. ಇಲ್ಲಿದ್ದಿದ್ದರೆ ಪ್ರತಿಪಕ್ಷಗಳು ಇಷ್ಟುಹೊತ್ತಿಗೆ ಚಿದುರನ್ನ 2ಜಿ ಹಗರಣದಲ್ಲಿ ಸಿಕ್ಕಿಸಿ, ಹುರಿದು ಮುಕ್ಕಿಯಾಗಿಬಿಡುತ್ತಿತ್ತು!
****************************************************************************

400 ಕೋಟಿಗೆ ಬಂಗಲೆ ಖರೀದಿ 

 

 ಇಂದು ಉಳ್ಳವರು ಶಿವಾಲಯದ ಬದಲಿಗೆ ಸ್ವಾಲಯ ಮಾಡುವರು. ಸಜ್ಜನ್ ಜಿಂದಾಲ್ ಎಂಬ ಸಜ್ಜನ ಅಮೋಘ 400 ಕೋಟಿ ರೂಗಳ ಸಮುದ್ರ ಕಿನಾರೆಯ ಬಂಗಲೆಯನ್ನು ಮುಂಬೈನ ನೇಪಿಯನ್ಸೀ ರಸ್ತೆಯಲ್ಲಿ ಖರೀದಿಸಿ ಇತಿಹಾಸ ನಿಮರ್ಿಸಿದ್ದಾರೆ. ಭಾರತದ 3ನೇ ಅತಿಹೆಚ್ಚು ಆದಾಯವಿರುವ ಸ್ಟೀಲ್ಕಂಪನಿ `ಜೆಎಸ್ಡಬ್ಲ್ಯು'ದ ಒಡೆಯ ಸಜ್ಜನ್ಗೆ ಇದುವರೆಗೆ ವಾಸಿಸುತ್ತಿದ್ದ ಮೊರಿಯನ್ ಹೌಸ್ಗಿಂತಲೂ ಸಮುದ್ರ ತಟದಲ್ಲಿ ಒಂದು ಎಕರೆಗೂ ಹೆಚ್ಚು ವಿಸ್ತಾರದ ಪ್ರದೇಶದಲ್ಲಿ ಹಚ್ಚ ಹಸುರಿನ ಹುಲ್ಲುಗಾವಲಿನ ಹಿಂಭಾಗದಲ್ಲಿರುವ 3 ಅಂತಸ್ತಿನ ಇದುವರೆಗೆ `ಮಾಹೇಶ್ವರಿ ಹೌಸ್' ಎಂದು ಕರೆಸಿಕೊಳ್ಳುತ್ತಿದ್ದ ಈ ಬಂಗಲೆಯೇ ಹೆಚ್ಚು ಸೂಕ್ತ ಎನಿಸಿದ್ದೇ ತಡ, ಹಿಂದುಮುಂದೆ ನೋಡದೆ ಮೆನೇಜರ್ ಮುಖಾಂತರ ಡೀಲ್ ಕುದುರಿಸಿಯೇ ಬಿಟ್ಟರಂತೆ!
-Script: ಶಾಂತಲ

No comments:

Post a Comment