Monday, July 11, 2011

NEWSDIGEST....weekly column in Karmaveera

( Script:Shantala, Illustrations: Satish Sringeri)

ಪವಡಿಸುವ ಪರಮಾತ್ಮ ಈಗ ಲಕ್ಕಿ ಗಾಡ್
ಈ ಪದುಮನಾಭ ನಿಜವಾಗಿಯೂ ಪರಮಪುರುಷನೇ.. ಸದ್ಯದ ಆಡಿಟ್ ರಿಪೋಟರ್್ ಪ್ರಕಾರ ಒಂದು ಲಕ್ಷ ಕೋಟಿ ರೂಗಳಿಗೂ ಮೀರಿ ನಗನಾಣ್ಯಾಧಿಗಳ ಒಡೆಯ..ಜಗತ್ತಿನ ಅತ್ಯಂತ ಶ್ರೀಮಂತ ದೇವರಾಗಿದ್ದ ತಿರುಪತಿ ತಿಮ್ಮಪ್ಪನನ್ನು ರಾತೋರಾತ್ರಿಯ ಕಾಯರ್ಾಚರಣೆಯಲ್ಲಿ ಸೆಕೆಂಡ್ ಪ್ಲೇಸ್ಗೆ ಇಳಿಸಿ ತಾನು ಮಾತ್ರ ಏನೂ ನಡೆದೇ ಇಲ್ಲವೇನೋ ಎಂಬಂತೆ ಕೂಲ್ ಆಗಿ ರಿಲ್ಯಾಕ್ಸಿಂಗ್ ಪೋಸಿನಲ್ಲೇ ಪವಡಿಸಿರುವ ತಿರುವಾಂಕೂರಿನ ಅನಂತಪದ್ಮನಾಭನ ರಹಸ್ಯ ಭಂಡಾರವನ್ನ ಹೇಗೆ ರಕ್ಷಣೆ ಮಾಡೋದು ಅನ್ನೋದೆ ಈಗ ಕೇರಳ ಸಕರ್ಾರಕ್ಕೆ ದೊಡ್ಡ ತಲೆನೋವಾಗಿದೆಯಂತೆ! ಆರರಲ್ಲಿ ಐದು ರಹಸ್ಯ ಕೋಣೆಗಳ ಸಂಪತ್ತನ್ನು ಆಡಿಟ್ ನಡೆಯುತ್ತಿದ್ದಂತೆಯೇ ವಿಶ್ವಾದ್ಯಂತ ಅನಂತಕೋಟಿ ನಾರಾಯಣನ ಭಂಡಾರದ ಗುಣಗಾನವೇ.. ಈ ಕಾರಣದಿಂದಲೇ ಅಲ್ಲವೇ ಘಜಿನಿ, ಘೋರಿ ಮಹಮ್ಮದರಿಂದ ಹಿಡಿದು ಬ್ರಿಟೀಷರ ವರೆಗೆ ವಿದೇಶೀ ಲೂಟಿಕೋರರ ಗಮ್ಯ ಭಾರತದ ದೇವಾಯಲಗಳಾಗಿದ್ದುದು.. ಈ ವಿಷಯವೆಲ್ಲ ಹಾಗಿರಲಿ ತಿರುವನಂತಪುರದ ಅನಂತಪದ್ಮನಾಭನ ಸಕಲ ಸಂಪತ್ತಿನ ಬಗ್ಗೆ ಕೇಳಿ ಇದುವರೆಗೆ `ಕುಳಿತಿರುವ ಗಜಲಕ್ಷ್ಮಿ'ಯ ಆರಾಧಕರಾಗಿದ್ದವರೆಲ್ಲ ಇನ್ನುಮುಂದೆ ಈ ಪವಡಿಸುವ ಪರಮಾತ್ಮನ ಪೋಸ್ಟರ್ ಮನೇಲಿದ್ರೆ ಅದೃಷ್ಟ ಕೊಳ್ಳೆ ಹೊಡಕೊಂಡು ಮನೆಗೇ ಬರುತ್ತೇಂತ ಹೊಸ ಗಾಸಿಪ್ ಹಬ್ಬಿಸಿದರೂ ಆಶ್ಚರ್ಯಪಡಬೇಕಿಲ್ಲ!

ಜನಸೇವಕರಿಗೆ `ಸ್ವಂತ'ಕ್ಕೆ ಸಮಯವಿಲ್ಲ..
ಅಂತಿಮ ಗಡುವಿನ ನಂತರವೂ ಹಲವು ಮಂತ್ರಿ-ಶಾಸಕರು ಆಸ್ತಿ ವಿವರ ನೀಡಿಲ್ಲವಂತೆ! ಹೀಗೆ ಆಸ್ತಿ ವಿವರ ನೀಡಿ ಎನ್ನುವುದೇ ದೋಷಪೂರಿತ ಮತ್ತು ಸರಿಯಾದ ಕ್ರಮವಲ್ಲ. ಏಕೆಂದರೆ ಈ ಸಚಿವ-ಶಾಸಕರ ಮಹೋದಯರಿಗೆ ತಾನೆ ಯಾವ ಆಸ್ತಿ ಎಲ್ಲಿದೆ, ಎಷ್ಟಿದೆ, ಯಾರ ಹೆಸರಲ್ಲಿದೆ? ಸ್ವನಾಮಿಯೋ ಇಲ್ಲಾ ಬೇನಾಮಿಯೋ.. ಈ ಎಲ್ಲ ವಿವರಗಳೂ ಅಸಲಿಗೆ ಗೊತ್ತಿದ್ದರೆ ತಾನೆ ಅದನ್ನು ಬಹಿರಂಗ ಪಡಿಸುವುದು...ಇಷ್ಟಕ್ಕೂ ನಿಗದಿತ ಅಜರ್ಿ ನಮೂನೆ ಎಲ್ಲಿ ಸಾಕಾಗುತ್ತದೆ ಎಲ್ಲ ಆಸ್ತಿ ವಿವರ ನೀಡುವುದಕ್ಕೆ? ಜನಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಇವರಿಗೆ ಸದಾ ಸಾರ್ವಜನಿಕ ಹಿತಾಸಕ್ತಿಯ ಕಡೆ ಗಮನವೇ ಹೊರತು, ಸ್ವಂತ ಆಸ್ತಿಪಾಸ್ತಿಗಳನ್ನ ಲೆಕ್ಕ ಮಾಡೋಕೆ ಸಮಯವಾದರೂ ಎಲ್ಲಿಂದ ಸಿಗಬೇಕು? ಛೆ ಪಾಪ! ಅಂದಹಾಗೆ ಈ ಪಟ್ಟಿಯಲ್ಲಿರುವವರೆಂದರೆ ರೇಣುಕಾಚಾರ್ಯ, ಎ. ನಾರಾಯಣಸ್ವಾಮಿ, ಕೃಷ್ಣ ಜೆ. ಪಾಲೆಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಚ್.ಡಿ. ರೇವಣ್ಣ, ಅನಿತಾ ಕುಮಾರಸ್ವಾಮಿ, ಎಚ್.ಸಿ. ಬಾಲಕೃಷ್ಣ ಡಿ.ಕೆ. ಶಿವಮಕುಮಾರ್, ಸಂತೋಷ್ಲಾಡ್, ಸಿ.ಎಸ್. ನಾಡಗೌಡ.. (ವಿ.ಸೂ. ಪಟ್ಟಿ ಉದ್ದವಿರುವುದರಿಂದ, ಸ್ಥಳಾಭಾವದ ಕಾರಣದಿಂದ ಕೆಲವು ಹೆಸರುಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ)


ನಮಗೆ ಯಾರು ಮಾದರಿ?
ದೇಶಕ್ಕಾಗಿ ಹೋರಾಡಿ ಮಡಿದ ಕಿತ್ತೂರ ಚೆನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿ, ಬೆಳವಡಿ ಮಲ್ಲಮ್ಮ, ಅಬ್ಬಕ್ಕರೋ ಇಲ್ಲಾ ಪ್ರೇಮಿಸುವ ನಾಟಕವಾಗಿ ಅಸಲಿ ಪ್ರಿಯತಮನೊಂದಿಗೆ ಸೇರಿ ನಕಲಿ ಪ್ರೇಮಿಯನ್ನ ತುಂಡುತುಂಡಾಗಿ ಕತ್ತರಿಸಿ ಕೊಂದ ನಟಿ ಮರಿಯಾ ಸುಸೈರಾಜ್ಳೋ.. ಇದಕ್ಕೆ ಈ ಸಮಾಜದ ಪ್ರಜ್ಞಾವಂತ ನಾಗರಿಕರು ಉತ್ತರಿಸಬೇಕು. ಇತ್ತೀಚೆಗೆ ಮರಿಯಾ ಜೈಲಿನಿಂದ ಬಿಡುಗಡೆಯಾದಾಗ ಆಕೆಯನ್ನ ರಾಷ್ಟ್ರದ ವೀರವನಿತೆ ಎಂಬಂತೆ ಟಿವಿ ವಾಹಿನಿಗಳು ಬಿತ್ತರಿಸಿದ್ದು ನಿಜಕ್ಕೂ ಈ ಪ್ರಜಾಪ್ರಭುತ್ವದ ದುರಂತ. ಇದು ಸಾಲದೆಂಬಂತೆ ಬಾಲಿವುಡ್ನಿಂದ ಆಕೆಗೆ ಆಫರ್ಗಳ ಮೇಲೆ ಆಫರ್ಗಳು, ಬಿಗ್ಬಾಸ್ನಿಂದ 5 ಕೋಟಿಯ ಆಮಿಷ.. ಹಾಗಾದರೆ ಈ ದೇಶದಲ್ಲಿ ಫೇಮಸ್ಸಾಗಬೇಕಾದರೆ, ಹಣ ಮನೆ ಬಾಗಿಲಿಗೆ ಬಂದು ಬೀಳಬೇಕೆಂದರೆ ಏನು ಮಾಡಬೇಕೆಂಬುದನ್ನು ಮರಿಯಾ ಸುಸೈರಾಜ್ಳನ್ನ ನೋಡಿದ ನಂತರ ಬಿಡಿಸಿ ಹೇಳಬೇಕಿಲ್ಲವಷ್ಟೆ..  ರನವೇ ಬ್ರೈಡ್!
90ರ ದಶಕದ ಈ ಜನಪ್ರಿಯ ಹಾಲಿವುಡ್ ಚಿತ್ರದಲ್ಲಿ ನಾಯಕಿಗೆ ಹಸೆಮಣೆಯಿಂದ ಓಡಿಹೋಗುವ ಚಟ.. ಇಂಥ ವಿಚಿತ್ರ ನಡವಳಿಕೆಯವರಿರುತ್ತಾರೆಯೇ ಎಂದು ಆಶ್ಚರ್ಯಪಟ್ಟವರಿಗೆಲ್ಲ ಮೊನಾಕೊದ ರಾಜಕುಮಾರಿ ಚಾಲರ್ಿನ್ ವಿಟ್ಸ್ಟಾಕ್ಳನ್ನು ನೋಡಿದರೆ ಹೌದು ನಿಜ ಜೀವನದಲ್ಲೂ ಇಂಥದ್ದು ನಡೆಯಲು ಸಾಧ್ಯ ಎಂದು ತಿಳಿಯುತ್ತದೆ. ದಕ್ಷಿಣ ಆಫ್ರಿಕಾದ ಮಾಜಿ ಸ್ವಿಮ್ಮಿಂಗ್ ಚಾಂಪಿಯನ್ ಆದ ಈಕೆ ಅದೇಕೆ ಅಥ್ಲೀಟ್ಗಳ ಹಾಗೆ ಒಂದಲ್ಲ ಎರಡಲ್ಲ ಮೂರು ಬಾರಿ ಈ ಮದುವೆಯಿಂದ ಪರಾರಿ ಆಗೋಕೆ ಪ್ರಯತ್ನಿಸಿದಳು ಎಂಬುದು ಇನ್ನೂ ರಹಸ್ಯವೇ! ಐವತ್ಮೂರರ ಹರಯದ ರಾಜಕುಮಾರ ಆಲ್ಬಟರ್್ ಹಾಗೂ ಮೂವತ್ಮೂರರ ಚಾಲರ್ಿನ್ ನಡುವೆ ಬರೋಬ್ಬರಿ ಇಪ್ಪತ್ತು ವರ್ಷಗಳ ಅಂತರ. ನೋಡಲು ಇವಳು ಸುರಸುಂದರಿ ಆತನೋ ಬೋಳುತಲೆಯ ಸುಂದರ. ರಾಜ ಮನೆತನದವ ಎಂಬುದನ್ನು ಬಿಟ್ಟರೆ ಈತನಲ್ಲಿ ಮತ್ಯಾವುದೇ ವಿಶೇಷ ಗುಣಗಳಿಲ್ಲ. ಹೊರಜಗತ್ತಿಗೆ ನಾರ್ಮಲ್ ಆಗೇ ಕಾಣುವ ಪ್ರಿನ್ಸೆಸ್ ಚಾಲರ್ಿನ್ ಅವಕಾಶ ಸಿಕ್ಕಿದಾಗಲೆಲ್ಲ ತವರಿಗೆ ಓಡಿಹೋಗಲು ಹಂಬಲಿಸುತ್ತಾಳೆ ಎಂದೋ ಏನೋ ಪ್ರಿನ್ಸ್ ಆಲ್ಬಟರ್್ ತನ್ನ ಮುದ್ದಿನ ಪತ್ನಿಯನ್ನು ದಕ್ಷಿಣ ಆಫ್ರಿಕೆಗೇ ಮಧುಚಂದ್ರಕ್ಕೆ ಕರೆದೊಯ್ಯಲು ತೀಮರ್ಾನಿಸಿದ್ದಾನೆ! ತವರಿಗೆ ಹೋದ ಮೇಲೆ ಚಾಲರ್ಿನ್ ಏನು ಮಾಡಬಹುದು? ಇದು ಈ ಹೊತ್ತಿನ ಸಾರ್ವತ್ರಿಕ ಕುತೂಹಲಗಳಲ್ಲೊಂದಾಗಿದೆ!


court ಪ್ರಪೋಸಲ್
ನನ್ನ ಮದುವೆ ಆಗ್ತೀಯಾ? ಅಂತ ಆಕಾಶ, ಭೂಮಿ, ಪಾತಾಳ... ಹೀಗೆ ಎಲ್ಲಲ್ಲೋ ಕೇಳಿದ್ದಿದೆ ಆದರೆ ಕ್ರೀಡಾಂಕಣದಲ್ಲಿ ಅದೂ ಕಣದಲ್ಲಿರುವ ಆಟಗಾರನಿಗೆ ಬಹಿರಂಗ ಪ್ರಪೋಸ್ ಮಾಡಿದ ಘಟನೆ ಹಲವರಿಗೆ ಗೊತ್ತಿಲ್ಲದಿರಬಹುದು. ಇತ್ತೀಚೆಗಷ್ಟೆ ವಿಂಬಲ್ಡನ್ ಟೂನರ್ಿ ಮುಕ್ತಾಯವಾದ ಸಂದರ್ಭದಲ್ಲಿ ಕಳೆದ ವರ್ಷದ ಈ ಘಟನೆ ನೆನಪಿಗೆ ಬಂತು. ಅದು ನಡೆದಿದ್ದು 2010ರ ಜನೆವರಿಯಲ್ಲಿ ಮೆಲ್ಬೋನರ್್ನಲ್ಲಿ. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಲಾನ್ಟೆನಿಸ್ನ ಹಾಟ್ಸ್ಟಾರ್ ರಫೆಲ್ ನಡಾಲ್ಗೆ ಸ್ಪೇನ್ ಮೂಲದ ಅಭಿಮಾನಿಯೊಬ್ಬಳು ಬಹಿರಂಗವಾಗಿ `ಹೇ ರಫೆಲ್ ವಿಲ್ ಯೂ ಮ್ಯಾರಿ ಮಿ..' ಎಂದು ಕೂಗೇಬಿಟ್ಟಳು! ಅದನ್ನು ಕೇಳಿ ಕೆಂಪುಕೆಂಪಾದ ನಡಾಲ್, ಸುಮ್ಮನೆ ಅಡ್ಡಡ್ಡ ತಲೆ ಆಡಿಸಿ ಮುಗುಳ್ನಗೆಯಲ್ಲಿ ಉತ್ತರವನ್ನ ತೇಲಿಸಿಬಿಟ್ಟ. ಇದೇ ರೀತಿಯ ತೊಂಬತ್ತರ ದಶಕದಲ್ಲಿ ಅಂದಿನ ಹಾಟ್ಫೆವರಿಟ್ ಆಗಿದ್ದ ಜರ್ಮನಿಯ ಸ್ಟೆಫಿಗ್ರಾಫ್ಗೆ ಅಭಿಮಾನಿಯೊಬ್ಬ ಕೇಳಿದಾಗ ಮೊದಲು ನಸುನಕ್ಕ ಸ್ಟೆಫಿ, ಎದುರಾಳಿಗೆ ಬಾಲ್ ಸವರ್್ ಮಾಡುತ್ತಲೇ ಕೇಳಿದಳು `ಹೌ ಮಚ್ ಮನಿ ಯೂ ಹ್ಯಾವ್?' ಅಂತ.. ಸೇರಿಗೆ ಸವ್ವಾಸೇರು ಅಂದರೆ ಇದೇತಾನೇ.

No comments:

Post a Comment