Monday, August 8, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera

ವಾರದ ಗುದ್ದು


ಭ್ರಷ್ಟಾಚಾರವನ್ನು ಮಟ್ಟಾ ಹಾಕಿದರೆ ಭಯೋತ್ಪಾದನೆ ತಂತಾನೆ ಹೇಳಹೆಸರಿಲ್ಲದಂತಾಗುತ್ತದೆ
-ಸಂತೋಷ್ ಹೆಗ್ಡೆ,  ಮಾಜಿ ಲೋಕಾಯುಕ್ತ
























ತಮಿಳುನಾಡಿನಲ್ಲಿ ತಾಳಿಭಾಗ್ಯ


ದೇಶದ ಹೆಣ್ಣುಮಕ್ಕಳೆಲ್ಲ ದೀಪಾವಳಿ ವೇಳೆಗೆ ಚಿನ್ನದ ಬೆಲೆ ಕರೆಂಟು ಹೊಡಿಸುತ್ತಂತೆ ಎಂಬ ಭೀತಿಯಲ್ಲಿ ಅಡುಗೆಮನೆಯ ಡಬ್ಬ, ಸಂದಿಗೊಂದಿಗಳಲ್ಲಿ ಹುದುಗಿಸಿಟ್ಟಿದ್ದ ಪುಡಿ-ಹುಡಿಗಾಸುಗಳನ್ನೂ ಬಿಡದೆ ಚಿನ್ನಬೆಳ್ಳಿ ಅಂಗಡಿ ಮುಂದೆ ಕ್ಯೂ ನಿಂತಿದ್ದರೆ, ತಮಿಳುನಾಡಿನಲ್ಲಿ ಅಮ್ಮ ಜಯಲಲಿತಾ ತನ್ನ ಚುನಾವಣಾ ಆಶ್ವಾಸನೆ ಈಡೇರಿಕೆಗೆ 500 ಕೆಜಿ ಚಿನ್ನ ಖರೀದಿಸಲು ಈ ಸಾಲಿಗೆ 118.18 ಕೋಟಿ ರೂ ಮಂಜೂರು ಮಾಡಿದ್ದಾರೆ. ಈ ಸಾರಿ ಓಟು ಪಡೆದುಕೊಳ್ಳುವ ಸಂದರ್ಭದಲ್ಲಿ ಕೊಟ್ಟ ಮಾತಿಗೆ ತಪ್ಪಲಾರದೆ ಪುರಚ್ಚಿ ತಲೈವಿ, ರಾಜ್ಯದ ಬಡ ಹೆಣ್ಣುಮಕ್ಕಳು ಮದುವೆಗೆ `ತಿರುಮಾಂಗಲ್ಯ' ಮಾಡಿಸಲು ತಲಾ 4 ಗ್ರಾಂ ಚಿನ್ನ ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ತಮಿಳುನಾಡು ಸಕರ್ಾರವು ಎಸ್ಬಿಐ ಹಾಗೂ ಇತರೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಗುಣಮಟ್ಟದ ಚಿನ್ನ ಖರೀದಿಸಲು ಮುಂದಾಗಿದ್ದು, ಫಲಾನುಭವಿಗಳಿಗೆ ಟೋಕನ್ ಮೂಲಕ 4 ಗ್ರಾಂ ಚಿನ್ನದ ನಾಣ್ಯ ವಿತರಿಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚಚರ್ೆ ನಡೆಯುತ್ತಿದೆ. ಒಟ್ಟಿನಲ್ಲಿ ತಮಿಳು ಹೆಂಗೆಳೆಯರೆಲ್ಲ ಈಗ ಮಾಂಗಲ್ಯ, ಮಾಂಗಲ್ಯ ನಮ್ಮ ಜೀವಕಿಂತ ಮೌಲ್ಯ ಎಂದು ಹಾಡುವ ಕಾಲವಿದಾದರೆ ಸಕರ್ಾರದ ಬೊಕ್ಕಸಕ್ಕೆ ಮಾತ್ರ ಇದು ಖಜಾನೆ ಖಾಲಿಯಾಗುವ ಸಮಯ!
*******************************************************************************
ಕೃಷ್ಣ ಅದೃಷ್ಟವೋ ಅದೃಷ್ಟ!


ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಅದೃಷ್ಟವನ್ನು ಕಂಡು ಹಲಬುವವರೇ ಎಲ್ಲ! ಈ `ಹಲುಬಿಗ'ರಲ್ಲಿ ಹೆಚ್ಚಿನ ಮಂದಿ 60+ಗಳೇ ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾಗಿಲ್ಲವಷ್ಟೆ. ಆಹಾ.. ವಿದೇಶಾಂಗ ವ್ಯವಹಾರ ಖಾತೆಯಲ್ಲಿದ್ದರೆ ದಿನಕ್ಕೊಬ್ಬ ವಿದೇಶೀ ಸುಂದರಿಯೊಡನೆ ಕೈಕುಲುಕುವ ಫೋಟೋ ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು.. ಸುದ್ದಿವಾಹಿನಿಗಳಲ್ಲೆಲ್ಲ ಇದೇ ಸುದ್ದಿ.. ಆಹಾ ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ ಎಂದು ಎಸ್.ಎಂ. ಕೃಷ್ಣ ಹಿಲರಿ ಕ್ಲಿಂಟನ್, ಹೀನಾ ರಬ್ಬಾನಿ ಖಾರ್ ಅವರೊಂದಿಗೆ ಕುಶಲೋಪರಿ ನಡೆಸುತ್ತಿರುವ ಫೋಟೊಗಳನ್ನು ಕಂಡವರೆಲ್ಲ ಕನರ್ಾಟಕದ ಈ ಮಾಜಿ ಮುಖ್ಯಮಂತ್ರಿಯ ಅದೃಷ್ಟವನ್ನು ಕಂಡು ಕರುಬಿದವರೇ.  ಈ `ಕರುಬಿಗ'ರಲ್ಲಿ ಮಾಜಿ ರಾಜ್ಯಪಾಲ ಎನ್.ಡಿ. ತಿವಾರಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿರುವುದು ಸತ್ಯವೋ, ಮಿಥ್ಯೆಯೋ ತಿಳಿಯದಾಗಿದೆ!
**************************************************************************************

ದೈತ್ಯರಿಗೆ `ಮಿನಿ'ಯಲ್ಲಿ ನಿರಾಸಕ್ತಿ!





ಮಿನಿ ಕಾರುಗಳನ್ನು ತಯಾರಿಸಲು ದೈತ್ಯ ಕಾರು ಕಂಪನಿಗಳಿಗೆ ಆಸಕ್ತಿ ಇಲ್ಲವಂತೆ! ಎರಡು ವರ್ಷಗಳ ಹಿಂದೆ `ಟಾಟಾ'ದವರು ನ್ಯಾನೋ ಕಾರು ಮಾಡಿ ತೋರಿಸಿದಾಗ ಒಬ್ಬರ ಮೇಲೊಬ್ಬರಂತೆ ತಾವೂ ಪುಟಾಣಿ ಕಾರುಗಳನ್ನು ತಯಾರಿಸುವುದಾಗಿ ಘೋಷಿಸಿದ್ದ ಫೋಡರ್್, ಜನರಲ್ ಮೊಟಾರ್ಸ್, ರೆನಾಲ್ಟ್-ನಿಸ್ಸಾನ್ಗಳೆಲ್ಲ ಈಗ ತಮಗೆ ಈ ಯೋಜನೆಯಲ್ಲಿ ಆಸಕ್ತಿಯಿಲ್ಲ ಎಂದು ಸ್ಟಷ್ಪಪಡಿಸಿವೆ. ಈಗ ಭಾರತ ಹಾಗೂ ಚೀನಾದಲ್ಲಿ ಪುಟಾಣಿ ಕಾರು ಕೊಳ್ಳದೆಯೇ ನೇರವಾಗಿ ಮಧ್ಯಮ ಗಾತ್ರದ ಕಾರು ಕೊಳ್ಳುವಷ್ಟು ಆಥರ್ಿಕವಾಗಿ ಸಶಕ್ತರಾಗುತ್ತಿರುವವರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿದೆ. ಹೀಗಾಗಿ ಸುಖಾಸುಮ್ಮನೆ ಮಿನಿ ಕಾರು ತಯಾರಿಸುವುದರಲ್ಲಿ ಅರ್ಥವಿಲ್ಲ. ಟಾಟಾದ `ನ್ಯಾನೋ', ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಕೆಳ ಮಧ್ಯಮವರ್ಗದವರೂ ಕೂಡ ನ್ಯಾನೋ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈಗ ಮಧ್ಯಮ ಗಾತ್ರದ  ಕಾರುಗಳನ್ನು ತಯಾರಿಸುವುದೇ ಲಾಭದಾಯಕ ಎಂದು ಈ ಮೂರೂ ದೈತ್ಯ ಕಾರು ಕಂಪನಿಗಳು ಅಭಿಪ್ರಾಯಪಟ್ಟಿವೆ. ಯಾವ ಕಾರೇ ಬಂದರೂ ನಮ್ಮ ಭಾರತದ ಪ್ರಮುಖ ನಗರಗಳಲ್ಲಿನ ಟ್ರಾಫಿಕ್ ಜಾಮ್ ಸುಧಾರಿಸಲು ಸಾಧ್ಯವಿಲ್ಲ. ಈ ಕಂಪನಿಗಳೆಲ್ಲ ಮಧ್ಯಮ ಗಾತ್ರದ ಕಾರುಗಳಿಗಿಂತ ಆಕಾಶದಲ್ಲಿ ಹಾರಬಲ್ಲ ರೆಕ್ಕೆಯ ಕಾರುಗಳನ್ನು ತಯಾರಿಸುವುದೇ ಸೂಕ್ತವಲ್ಲವೇ