Monday, August 1, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera

( Script: Shantala, Illustrations: Satish Sringeri) 

 ವಾರದ ಗುದ್ದು





" ಒಂದೊಮ್ಮೆ ಕಾರ್ಯಕರ್ತರ ಪಕ್ಷವಾಗಿದ್ದ ಬಿಜೆಪಿ ಈಗ ಪುತ್ರ, ಪುತ್ರಿಯರು ಮತ್ತು ಬಂಧುಗಳ ಪಕ್ಷವಾಗಿದೆ. ಪ್ರಜಾತಂತ್ರಕ್ಕೆ ಬದಲಾಗಿ `ಪರಿವಾರತಂತ್ರ' ಸಂಸ್ಕೃತಿ ಬಿಜೆಪಿಯಲ್ಲಿಂದು ವಿಜೃಂಬಿಸುತ್ತಿರುವುದು ವಿಷಾದನೀಯ"
-ಶಾಂತಕುಮಾರ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ









ಭ್ರಷ್ಟಾಚಾರ ಸಕ್ರಮಗೊಳಿಸಬೇಕಂತೆ!


ಮಹಾತ್ಮ ಗಾಂಧಿ ಈ ಮಾತನ್ನೇನಾದರೂ ಕೇಳಿದ್ದರೆ ಏನು  ಮಾಡುತ್ತಿದ್ದರೋ ಇಲ್ಲಾ ಮಾಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ! ಲಂಚ ತಗೊಳ್ಳೋದನ್ನ ಸಕ್ರಮಗೊಳಿಸುವುದರಿಂದ ಭ್ರಷ್ಟಾಚಾರದ ಪಿಡುಗನ್ನು ನಿಯಂತ್ರಿಸಬಹುದು ಎಂದು ದಿಲ್ಲಿಯಲ್ಲಿ ದಬರ್ಾರ್ ನಡೆಸುವವರೇ ಬಹಿರಂಗವಾಗಿ ಹೇಳುತ್ತಾರೆಂದರೆ.. ಅದೂ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ನೇತೃತ್ವದ ಆಂದೋಲನದ ಕಾವು ಇನ್ನೂ ಆರುವ ಮೊದಲೇ! ಇರುವುದರಲ್ಲಿ ಪರವಾಗಿಲ್ಲ ಎಂಬಂತಿರುವ ಕೇಂದ್ರ ವಿತ್ತ ಸಚಿವ ಪ್ರಣವ್ ಮುಖಜರ್ಿ ಅವರ ಪ್ರಧಾನ ಸಲಹೆಗಾರ ಕೌಶಿಕ್ ಬಸು ಅವರ ಪ್ರಕಾರ ವಿಶ್ವದ ಪರಮಭ್ರಷ್ಟ ದೇಶಗಳಲ್ಲೊಂದಾಗಿರುವ ಭಾರತದಲ್ಲಿ ಲಂಚದ ಪಿಡುಗನ್ನು ಮಟ್ಟಾ ಹಾಕಲು ಭ್ರಷ್ಟಾಚಾರವನ್ನ ಸಕ್ರಮಗೊಳಿಸಬೇಕು. ಎಲ್ಲಾ ಅಕ್ರಮಗಳನ್ನು ಸಕ್ರಮಗೊಳಿಸುತ್ತಾ ಹೋದರೆ ಸತ್ಯ, ಸತ್ಯಾಗ್ರಹಗಳಿಗೆ ಬೆಲೆಯೇ ಇರುವುದಿಲ್ಲ. ಭ್ರಷ್ಟಾಚಾರವನ್ನೇ ಸಕ್ರಮಗೊಳಿಸಬೇಕೆಂದು ದೇಶದ ಆಥರ್ಿಕ ಸೂತ್ರಗಳನ್ನು ಹಿಡಿದವರು ಅಭಿಪ್ರಾಯಪಡುವುದಾದರೆ, ವೇಶ್ಯಾವಾಟಿಕೆಯನ್ನೂ ಸಕ್ರಮಗೊಳಿಸಬೇಕೆಂಬ ಕೂಗು ಕೇಳಿಬಂದರೂ ಆಶ್ಚರ್ಯಪಡಬೇಕಿಲ್ಲ!
*********************************************************************
ಕಲ್ಮಾಡಿ ಮರೆಗುಳಿತನದ ರೋಗಿ!

ಕಳ್ಳನಿಗೊಂದು ಪಿಳ್ಳೆ ನೆವ ಅನ್ನೋ ಗಾದೆ ಸದ್ಯದ ಮಟ್ಟಿಗೆ ಸುರೇಶ್ ಕಲ್ಮಾಡಿಗೆ ಸೂಕ್ತವಾಗಿ ಅನ್ವಯಿಸುತ್ತದೆ. ಕಾಮನ್ವೆಲ್ತ್ ಕ್ರೀಡಾಕೂಟದ ಬಹುಕೋಟಿ ಅಕ್ರಮ ಹಗರಣದ ಪ್ರಮುಖ ಆರೋಪಿ ಕಲ್ಮಾಡಿ ತಿಹಾರ್ ಜೈಲಿನಿಂದ ಹೊರಬರಲು ಶತಾಯಗತಾಯ ಪ್ರಯತ್ನಿಸುತ್ತಿದ್ದು, ಅದಕ್ಕೆ ಡಿಮೆನ್ಶಿಯಾ(ವೃದ್ಧಾಪ್ಯದಲ್ಲಿ ಬರುವ ಮರೆಗುಳಿತನ) ರೋಗದ ಆಸರೆ ಪಡೆಯಲು ಮುಂದಾಗಿದ್ದಾರೆ! ಕಳೆದ ನಾಲ್ಕೈದು ವರ್ಷಗಳಿಂದ ಈ  ಕಾಯಿಲೆಯಿಂದ ತಮ್ಮ ಕಕ್ಷಿದಾರರು ಬಳಲುತ್ತಿದ್ದು, ಅವರಿಗೆ ಬಹುಶಃ ಬಹುಕೋಟಿ ಹಗರಣದ ವಿಚಾರಣೆ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಗಳಂತೆ ಸಹಕರಿಸಲು ಸಾಧ್ಯವಾಗದೆ ಹೋಗಬಹುದು ಎಂಬುದು ಕಲ್ಮಾಡಿ ಪರ ವಕೀಲರ ಅಂಬೋಣ. ಕೋಟಿಗಟ್ಟಲೆ ಹಣ ಗುಳುಂ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ನೀಡದ ಡಿಮೆನ್ಶಿಯಾ ಈಗ ತಿಹಾರ್ ಜೈಲಿನಲ್ಲಿರುವ ಸಂದರ್ಭದಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ ಈ ರೋಗ ಪುಣೆಯ ಈ ಸಂಸದರಿಗೆ ಸಂಸತ್ ಅಧಿವೇಶನದಲ್ಲಿ ಭಾಗವಹಿಸುವುದಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲವೇ ಎಂದು ಆಶ್ಚರ್ಯವಾಗುತ್ತಿದೆ!
*************************************************************************
ಅಮರ್ ಬಾಯಿ ಬಿಟ್ಟರೆ
ಮುಲಾಯಂ ಬಣ್ಣ ಬಯಲು!



ಹಿಂದೊಂದು ಕಾಲದಲ್ಲಿ ಎರಡು ದೇಹ ಒಂದು ಆತ್ಮವಾಗಿದ್ದ, ಗೆಳೆತನಕ್ಕೆ ಮಾದರಿಯಾಗಿದ್ದ ಮುಲಾಯಂಸಿಂಗ್ ಯಾದವ್, ಅಮರ್ಸಿಂಗ್ ಜೋಡಿ ನಂತರ ಎಣ್ಣೆ ಸೀಗೆಕಾಯಿಗಳಾಗಿ ದೂರ ಸಿಡಿದು ಹೋಗಿರುವುದು ಗೊತ್ತಿದ್ದೇ. ಆದರೆ ಇದೀಗ ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಮರ್ಸಿಂಗ್ರನ್ನು ವಿಚಾರಣೆಗೊಳಪಡಿಸಿ ಮಾನಸಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮುಲಾಯಂಜಿ ಹೇಳಿಕೆ ನೀಡಿರುವುದು, ಸದ್ಯ ಸಂಕಷ್ಟದಲ್ಲಿರುವ ತಮ್ಮ ಮಾಜಿ ಗೆಳೆಯನಿಗೆ ಆಸರೆಯಾಗಿ ಅಲ್ಲ, ಬದಲಿಗೆ ಸ್ವಯಂ ಬಚಾವೋ ಸಲುವಾಗಿ ಎಂಬುದು ಕಟುಸತ್ಯ. ಅಮರ್ ಬಾಯಿ ಬಿಟ್ಟರೆ ತನ್ನ ಬಣ್ಣ ಬಯಲಾಗುತ್ತೆ ಎಂಬುದನ್ನು ಚೆನ್ನಾಗಿ ಮನಗಂಡಿರುವ ಉತ್ತರಪ್ರದೇಶದ ಈ ಮಾಜಿ ಮುಖ್ಯಮಂತ್ರಿಗೆ,  ದೆಹಲಿ ಪೊಲೀಸರು ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ಮನೆ ಬಾಗಿಲು ತಟ್ಟಬಹುದು ಎಂಬ ಹೆದರಿಕೆ ತಮ್ಮ ಮಾಜಿ ಜಿಗರಿದೋಸ್ತ್ ಪರ ಹೇಳಿಕೆ ನೀಡಲು ಪ್ರೇರೇಪಿಸಿರಬಹುದು.

*************************************************************
ಮೆಣಸಿನಕಾಯಿ ಬಾಂಬ್!

ಚಟ್ನಿ, ಉಪ್ಪಿನಕಾಯಿ, ಬಜ್ಜಿ, ಬೋಂಡಾಗಳಿಗೆ ಸೀಮಿತವಾಗಿದ್ದ ಮೆಣಸಿನಕಾಯಿಯಿಂದ ಬಾಂಬ್ ತಯಾರಿಸುವುದರ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಭಾರತದ ಮೆಣಸಿನಕಾಯಿ ವಿಪರೀತ ಚುರುಕಾಗಿದ್ದು ಇದನ್ನು ಬಳಸಿ 81 ಮಿಮೀ ಕೈ ಬಾಂಬ್ ತಯಾರಿಸಲಾಗಿದ್ದು, ಈಗಾಗಲೇ ಭಾರತೀಯ ಸೇನೆಯ ಅಸ್ತ್ರಗಳಲ್ಲಿ ಒಂದಾಗಿ ಸೇರ್ಪಡೆಯೂ ಆಗಿರುವ . ಈ ಖಾರಾ ಬಾಂಬ್ ಇತ್ತೀಚಿಗೆ ಇಂಗ್ಲೆಂಡ್ ಮಾರುಕಟ್ಟೆಗೂ ಲಗ್ಗೆ ಇಟ್ಟು ಅಲ್ಲೂ ಭಾರೀ ಪ್ರಶಂಸೆ, ಬೇಡಿಕೆ ಗಿಟ್ಟಿಸುವಲ್ಲಿ ಯಶಸ್ವೀಯಾಗಿದೆ. ಗುಂಪು ಚೆದುರಿಸಲು ಅಪಾಯಕಾರಿಯಲ್ಲದ ಮೆಣಸಿನಪುಡಿಯ ಹ್ಯಾಂಡ್ ಗ್ರೆನೇಡ್ ಬಳಸುವ ಭಾರತದ ಕ್ರಮವನ್ನು ವಿಶ್ವದ ಇತರೆ ರಾಷ್ಟ್ರಗಳು ಶ್ಲಾಘಿಸಿದ್ದು, ಈ ಬಾಂಬನ್ನು `ನಾಗಾ ವೈಪರ್ ಚಿಲ್ಲಿ' ಎಂಬ ತಳಿಯನ್ನು ಬಳಸಿ ಸಿದ್ಧಪಡಿಸಲಾಗುತ್ತಿದೆ. ಸಿಯಾಚಿನ್ ಹಿಮ ಪ್ರದೇಶದಲ್ಲಿನ ಚಳಿಯನ್ನು ಎದುರಿಸಲು ದೇಹದಲ್ಲಿ ಉಷ್ಣವನ್ನು ಹೆಚ್ಚಿಸಲು ವಿಶ್ವದ ಅತಿಖಾರದ ಮೆಣಸಿನಕಾಯಿಯಾದ `ಭೂತ್ ಜಲೋಕಿಯಾ'ವನ್ನು ಈಗಾಗಲೇ ಬಳಸಲಾಗಿದ್ದು, ನಾಗಾ ವೈಪರ್ ಚಿಲ್ಲಿಯ ಕೈಬಾಂಬ್ನ್ನು ಪುಂಡು ಆನೆಗಳ ನಿಯಂತ್ರಣಕ್ಕೂ ಮಧ್ಯಪ್ರದೇಶದಲ್ಲಿ ಬಳಸಲಾಗುತ್ತಿದೆ. ಈ ಮೆಣಸಿನಕಾಯಿ ಗ್ರೆನೇಡ್ ದಾಳಿಗೆ ತುತ್ತಾದವರು ಅವರ ಜನ್ಮೇಪಿ ಖಾರದ ಹೆಸರೆತ್ತುವ ಸಾಹಸ ಮಾಡುವುದಿಲ್ಲವಂತೆ!




**********************************************************************
ಚೀನಾದಲ್ಲಿ ಈಗ ಆ್ಯಪಲ್ ಯುಗ


ಅಮೆರಿಕಾ ಆದಿಯಾಗಿ ವಿಶ್ವದ ಎಲ್ಲ ಮಾರುಕಟ್ಟೆಗಳಲ್ಲಿ `ಮೇಡ್ ಇನ್ ಚೈನಾ' ಸಾಮಗ್ರಿಗಳ ಪಾರುಪತ್ಯವಾದರೆ ಚೀನಾದಲ್ಲಿ ಮಾತ್ರ ಈಗ ಆ್ಯಪಲ್ ಯುಗ! ರಾಜಧಾನಿ ಬೀಜಿಂಗ್ ಹಾಗೂ ಶಾಂಘೈಗಳಲ್ಲಿ ತಲಾ ಎರಡು `ಆ್ಯಪಲ್ ಸ್ಟೋರ್' ಪ್ರಾರಂಭವಾಗಿದ್ದು ಇಲ್ಲಿನ ಜನಜಂಗುಳಿ ನಿಯಂತ್ರಿಸುವುದೇ ಸಿಬ್ಬಂದಿಗೆ ದೊಡ್ಡ ತಾಪತ್ರಯವಂತೆ! 16000 ಚದರ ಅಡಿ ವಿಸ್ತೀರ್ಣದ ಬೃಹತ್ ಮಳಿಗೆಯಾಗಿದ್ದರೂ ಈ ಗ್ಯಾಡ್ಜೆಟ್ ಸ್ಟೋರ್ ಒಳಹೊಕ್ಕು ಹೊರಬರಲು ಹರಸಾಹಸ ಪಡಲೇಬೇಕಂತೆ! ಟ್ವಿಟ್ಟರ್, ಫೇಸ್ಬುಕ್, ಗೂಗಲ್, ಗೂಗಲ್ ಪ್ಲಸ್ಗಳನ್ನು ಗಾವುದ ದೂರ ಇರಿಸಿರುವ ಚೀನಾದ ಕಮ್ಯುನಿಸ್ಟ್ ಆಡಳಿತವೂ ಆ್ಯಪಲ್ನ ನಿತ್ಯನೂತನ ಉತ್ಪನ್ನಗಳಿಗೆ ಮಾರುಹೋಗಿದೆಯಂತೆ! 5ಜಿ ಐಫೋನ್, ಟಚ್, ಐಪಾಡ್, ಐಪಾಡ್-2, ಮ್ಯಾಕ್ಬುಕ್ ಮೊದಲಾದ ಆ್ಯಪಲ್ ಉತ್ಪನ್ನಗಳನ್ನು ಕಂಡೊಡನೆ ಸಿಡಕಲು ಮೋರೆಯ ಚೀನೀ ಅಧಿಕಾರಿಗಳೇ ನಸುನಗೆ ಬೀರುತ್ತಾರೆಂದರೆ ಇನ್ನು ಹದಿಹರೆಯದವರು ಈ ಗ್ಯಾಡ್ಜೆಟ್ಗಳ ಫ್ಯಾನ್ಗಳಾಗದಿರಲು ಸಾಧ್ಯವೇ? ಅಮೆರಿಕೆಯ ಮನ್ಹಾಟನ್ನ ಫಿಫ್ತ್ ಅವೆನ್ಯೂನಲ್ಲಿರುವ ಆ್ಯಪಲ್ ಸ್ಟೋರ್ನ ಆದಾಯಕ್ಕಿಂತಲೂ ಬೀಜಿಂಗ್, ಶಾಂಘೈಗಳಲ್ಲಿರುವ ಈ ಕಂಪನಿಯ ಮಳಿಗೆಗಳಿಂದ ಹೆಚ್ಚಿನ ಆದಾಯವಿದೆಯೆಂದರೆ ಚೀನೀಯರು ಅದ್ಯಾವ ಪರಿಯಲ್ಲಿ ಆ್ಯಪಲ್ಗೆ ಮಾರುಹೋಗಿದ್ದಾರೆ ಎಂಬುದು ತಿಳಿಯುತ್ತದಷ್ಟೆ..

-ಶಾಂತಲಾ

No comments:

Post a Comment