Thursday, March 15, 2012

Cartoon for Editorial column(Samyukta Karnataka 16 March 2012)

ರಾಜಕೀಯ ಕನ್ನಡ ಕುಲಪುತ್ರರು

ಟೀಕೆ ಟಿಪ್ಪಣಿಗಳು ಏನೇ ಇರಲಿ, 50 ವರ್ಷಗಳ ಕಾಲ ಸತತವಾಗಿ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿರುವುದು ಸಾಮಾನ್ಯರಿಗಂತೂ ಆಗದ ಸಂಗತಿ. ಅದರಲ್ಲೂ ಸಂಸದೀಯ-ಶಾಸನಸಭೆಯ ಸದಸ್ಯರಾಗಿ ಅಧಿಕಾರದ ಸುತ್ತ ಪ್ರದಕ್ಷಿಣೆ ಹಾಗೂ ಅಪ್ರದಕ್ಷಿಣೆ ಹಾಕುತ್ತಲೇ ವೈರಿಗಳ ಜತೆಗೆ ಆತ್ಮೀಯರ ಸಂಕುಲವನ್ನೇ ಸೃಷ್ಟಿಸಿಕೊಳ್ಳುವುದು ಅಸಾಮಾನ್ಯ. ಕನರ್ಾಟಕದ ಮಟ್ಟಿಗೆ ಹೇಳುವುದಾದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಇಂತಹ ವಿಸ್ಮಯಕಾರಿ ಸಾಧನೆ ಮಾಡಿರುವ ಕನ್ನಡದ ಕುಲಪುತ್ರರು. ಬಹುಶ್ರುತ ಸಮಾಜದಲ್ಲಿ ಸಾರ್ವಜನಿಕ ಮುಖಂಡರ ನಿಲುವು ಒಲವುಗಳನ್ನು ಬೇಷರತ್ತಾಗಿ ಒಪ್ಪಲೇಬೇಕೆಂದೇನೂ ಇಲ್ಲ. ಆದರೆ, ಈ ಒಲವು ನಿಲುವುಗಳ ಹಿಂದಿರುವ ಸದಾಶಯ, ಸದ್ವಿಚಾರ ಹಾಗೂ ಸದಾಗ್ರಹಗಳು ಇದ್ದರೆ ಅವು ನಿಜಾರ್ಥದಲ್ಲಿ ಜನಮಾನಸದ ಅಗ್ಗಿಷ್ಟಿಕೆಯಲ್ಲಿ ಪರೀಕ್ಷೆಗೊಳಗಾಗಿ ಹಕ್ಕೊತ್ತಾಯಗಳಾಗಿಬಿಡುತ್ತವೆ. ಇಂತಹ ಹಕ್ಕೊತ್ತಾಯಗಳ ವಾರಸುದಾರರೆ ಜನನಾಯಕರು. 1962ರಲ್ಲಿ ಕನರ್ಾಟಕದ ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶಿಸಿದ ಈ ಇಬ್ಬರ ಬದುಕು ಒಂದು ರೀತಿಯಲ್ಲಿ ಕನರ್ಾಟಕದ ಏಳುಬೀಳುಗಳ ಕನ್ನಡಿ.

No comments:

Post a Comment