(Script : Shantala)
ಪ್ರತಿ ದುಃಖದ ಹಿಂದೆ..
ಯಾವ ಕಸರತ್ತು ಮಾಡಿದ್ರೂ ಕೇವಲ ಒಂದು ವಾರದಲ್ಲಿ 2 ಕೆಜಿ ಕೊಬ್ಬು ಕರಗಿಸೋಕೆ ಖಂಡಿತಾ ಸಾಧ್ಯವಾಗುತ್ತಿರಲಿಲ್ಲ! ಅಂಥ ಮಹಿಮೆ ಪರಪ್ಪನ ಅಗ್ರಹಾರ ಜೈಲಿನದ್ದು. ಮನೆಯಲ್ಲಿ ತಿಂದುಂಡು ಸುಖವಾಗಿದ್ದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಜಗದೀಶ್ ಜೈಲು ಸೇರಿದ ಒಂದು ವಾರಕ್ಕೇ ಎರಡು ಕೆಜಿ ಸಣ್ಣಗಾಗಿದ್ದಾರಂತೆ! ಅದೂ ಮನೆ ಊಟ ಉಂಡೇ ಇಷ್ಟೊಂದು ಕ್ಷಿಪ್ರ ಬದಲಾವಣೆಯಾದರೆ ಇನ್ನು ಸೆರೆಮನೆಯ ಅಸಲಿ ಫುಡ್ ಹೊಟ್ಟೆ ಸೇರಿದ್ರೆ ಬಹುಶಃ ಯಾವ ಸ್ಲಿಮ್ಮಿಂಗ್ ಕ್ಯಾಪ್ಸೂಲ್-ಜ್ಯೂಸ್ ಮಾಡದ ಕೆಲಸವನ್ನ ಕಲ್ಲು ಮುದ್ದೆ-ನೀರು ಸಾರು ಮಾಡಿಬಿಟ್ಟಿರುತ್ತಿತ್ತೇನೋ! ಅದಕ್ಕೇ ಬಲ್ಲವರು ಹೇಳೋದು `ಪ್ರತಿ ದುಃಖದ ಹಿಂದೆ ಒಂದು ಸುಖವೂ ಹಿಂಬಾಲಿಸುತ್ತೆ ಅಂತ'!!
ಲಂಚ ತಗೊಳ್ಳೋದು ತಪ್ಪು ಹೇಗೋ ಹಾಗೇ ಕೊಡುವುದೂ ಕೂಡ ಅಪರಾಧ ಎಂದು ಮುಂಬೈ ಹೈಕೋಟರ್್ ಇತ್ತೀಚೆಗೆ ತೀರ್ಪನ್ನಿತ್ತಿದೆ. ಸೊಲ್ಲಾಪುರದಲ್ಲಿ ಪತ್ರಕರ್ತರೊಬ್ಬರು ಪೊಲೀಸ್ ಅಧಿಕಾರಿಯೊಬ್ಬರಿಗೆ 3 ಸಾವಿರ ರೂ ಲಂಚ ನೀಡಲು ಹೋಗಿ ಸಿಕ್ಕಿಬಿದ್ದಿದ್ದರು. ಈ ಲಂಚ ನಿರಾಕರಿಸಿದ ಪೊಲೀಸ್ ಅಧಿಕಾರಿ ತಮಗೆ ರಿಷವತ್ತು ನೀಡಲು ಬಂದವರ ಮೇಲೆ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋಟರ್್ ನೀಡಿದ ತೀಪರ್ಿನಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾನೂನಿನನ್ವಯ ಲಂಚ ನೀಡುವುದು ಈ ಅಪರಾಧಕ್ಕೆ ಕುಮ್ಮಕ್ಕು ನೀಡಿದಂತೆ ಎಂದು ಪರಿಗಣಿಸಲಾಗುವುದು ಮತ್ತು ಈ ದುಷ್ಪ್ರೇರಣೆ ಶಿಕ್ಷಾರ್ಹ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಲಂಚ ಕೊಡುವುದಕ್ಕೆ ಮುನ್ನ ಸರಿಯಾಗಿ ಆಲೋಚಿಸಿ ಮುನ್ನಡೆಯುವುದು ಒಳ್ಳೆಯದು.
ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸರಿಗೆ ಪದಕ ನೀಡಿ ಸನ್ಮಾನಿಸುವುದು ಸಂಪ್ರದಾಯ. ಹೀಗೆ ಈ ಸಾರಿ ಪದಕ ಪಡೆದವರಲ್ಲಿ ಡಿಐಜಿ ನಳಿನ್ ಪ್ರಭಾತ್ರ ಹೆಸರೂ ಇದೆ. ಕಳೆದ ಏಪ್ರಿಲ್ನಲ್ಲಿ ದಾಂತೇವಾಡಾದಲ್ಲಿ ಮಾವೋವಾದಿಗಳಿಂದ 75 ಸಿಆರ್ಪಿಏಫ್ ಯೋಧರ ಹತ್ಯಾಕಾಂಡಕ್ಕೆ ಈ ನಳಿನ್ ಪ್ರಭಾತ್ ತೆಗೆದುಕೊಂಡ ವಿವೇಚನಾರಹಿತ ನಿಲುವೇ ಕಾರಣ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದರೂ ಪ್ರಭಾತ್ರಿಗೆ 2009ರಲ್ಲಿ ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಆರು ಉಗ್ರರನ್ನು ಹೊಡೆದುರುಳಿಸಿದ ಸಾಹಸಕ್ಕಾಗಿ ಈಗ 2011ರಲ್ಲಿ ಪದಕ ನೀಡಿರುವುದು ವಿಚಿತ್ರವಾಗಿದೆ ಎನಿಸುವುದಿಲ್ಲವೇ! ಮಾವೋಗಳ ವಿರುದ್ಧದ ಕಾಯರ್ಾಚರಣೆಗೂ ಕಾಶ್ಮೀರ ಕಣಿವೆಯಲ್ಲಿನ ಕಾಯರ್ಾಚರಣೆಗೂ ಇರುವ ಅಜಗಜಾಂತರವನ್ನು ತಿಳಿಯದ ಈ ಅಧಿಕಾರಿಗೆ 2009ರಲ್ಲಿ ಆರು ಉಗ್ರವಾದಿಗಳನ್ನು ಕೊಂದು ಹಾಕಿರಬಹುದು ಆದರೆ 2010ರಲ್ಲಿ ನಮ್ಮ 75 ಯೋಧರ ಸಾವಿಗೆ ಕಾರಣಕರ್ತ. ಇಂಥವರಿಗೆ ಶೌರ್ಯ ಪದಕ ನೀಡಿದ್ದು ಎಷ್ಟು ಸಮಂಜಸ ಎಂಬುದು ಬಿಎಸ್ಎಫ್ ಅಧಿಕಾರಿಗಳ ತಕರಾರು.
ಗೃಹಮಂತ್ರಿಯ ಮನೆಗೇ ಕನ್ನ!
ಭಾರತದ ಹಾಲಿ ಗೃಹಸಚಿವ ಪಿ. ಚಿದಂಬರಮ್ ಅವರ ಕುಟುಂಬದ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಂದನೂರು ಗ್ರಾಮದಲ್ಲಿರುವ ಚಿದು ಅವರ ಕುಟುಂಬದ ಮನೆಗೆ ಕಳ್ಳರು ಇತ್ತೀಚೆಗೆ ಕನ್ನ ಹಾಕಿದ್ದಾರೆ. ಈ ಮನೆ ಚಿದಂಬರಮ್ ಹಾಗೂ ಅವರ ಉಳಿದಿಬ್ಬರು ಸಹೋದರರಿಗೆ ಸೇರಿದ್ದಾಗಿದೆ. ಈ ಮನೆಯ ಕಿಟಕಿ ಸರಳುಗಳು ಮತ್ತು ಬಾಗಿಲುಗಳನ್ನು ಮುರಿದು ಕಳ್ಳರು ಒಳಹೊಕ್ಕಿದ್ದಾರೆ. ಭಾರತದ ಗೃಹ ಸಚಿವರ ಮನೆಯೇ ಸುರಕ್ಷಿತವಲ್ಲ ಎಂದ ಮೇಲೆ ಇನ್ನು ಯಾರ ಮನೆ ತಾನೇ ಸುಭದ್ರವಾಗಿರಲು ಸಾಧ್ಯ? ತಮಿಳುನಾಡಿನಲ್ಲಿ ಚಿದು ವೈರಿ ಸಕರ್ಾರ ಅಧಿಕಾರದಲ್ಲಿರುವುದರಿಂದ ಇಂಥ ಘಟನೆಗಳಿಗೆ ಹೆಚ್ಚು ಮಹತ್ವ ನೀಡಬೇಕಿಲ್ಲ ಎಂಬ ಮಾತು ಕೇವಲ ಕ್ಲೀಷೆಯಾಗಬಲ್ಲದಷ್ಟೆ..
ಬದಲಾವಣೆಯ ಬಾವುಟ
ಈ ಬದಲಾವಣೆ ಯಾತಕ್ಕಾಗಿಯೋ ಗೊತ್ತಿಲ್ಲ! ಆದರೆ ಡಿಎಂಕೆ ಪಕ್ಷ ಅಸ್ತಿತ್ವಕ್ಕೆ ಬಂದ 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿದೆ! ಕಾಂಗ್ರೆಸ್ನ ತತ್ವಗಳನ್ನು ಪ್ರಾರಂಭದಿಂದಲೂ ವಿರೋಧಿಸಿಕೊಂಡು ಬಂದಿರುವ ಈ ಅಪ್ಪಟ ದ್ರಾವಿಡ ಪಕ್ಷದವ ಹೈಕಮಾಂಡ್ಗೆ ಇದ್ದಕ್ಕಿದ್ದಂತೇ ಅದೇನನ್ನಿಸಿತೋ ಇಲ್ಲಾ ಜ್ಞಾನೋದಯವಾಯಿತೋ..ಒಟ್ಟಿನಲ್ಲಿ ಚೆನ್ನೈನಲ್ಲಿರುವ ಡಿಎಂಕೆ ಕೇಂದ್ರ ಕಚೇರಿಯ ಆವರಣದಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇಸರಿ ಬಿಳಿ ಹಸಿರು ಬಣ್ಣದ ತಿರಂಗಬಾವುಟ ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ರಾರಾಜಿಸಿತು!
No comments:
Post a Comment