(Script: Shantala)
ಹೊನ್ನಾಳಿಯಾಂವ ಈಗ `ನಗರ'ದ ರಾಜ
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸಚಿವ ಸಂಪುಟದ `ಡೇರ್ಡೆವಿಲ್' ಮಂತ್ರಿ ರೇಣುಕಾಚಾರ್ಯರಿಗೆ ಇದು ನಿಜಕ್ಕೂ ದೊಡ್ಡ ಸವಾಲೇ. ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನಿಭಾಯಿಸುವುದು ಎಂದರೆ ಅಷ್ಟು ಸುಲಭದ ಮಾತಲ್ಲ, ಎಂಟೆದೆಯ ಬಂಟನೇ ಆಗಿರಬೇಕು. ಈ ವಿಷಯದಲ್ಲಿ ಯುವಶಕ್ತಿ ರೇಣುಕಾಚಾರ್ಯರ ಧೈರ್ಯಸ್ಥೈರ್ಯಗಳನ್ನು ಸಂಶಯಿಸುವ ಹಾಗೇ ಇಲ್ಲ. ಅವರ ಸಾಮಥ್ರ್ಯದ ಆಳ ಬಲ್ಲವರಾಗಿರುವುದರಿಂದಲೋ ಏನೋ ಮುಖ್ಯಮಂತ್ರಿಗಳು ಅವರಿಗೆ ಚಾಮರಾಜನಗರ ಗಡಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿದ್ದಾರೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಕೇವಲ ಮುಖ್ಯಮಂತ್ರಿ ಪದವಿಯಲ್ಲಿರುವವರಿಗೆ ಅನ್ವಯವೇ ಹೊರತು, ಮಂತ್ರಿಗಳಾಗಿರುವವರಿಗೆ ಅಲ್ಲ ಅಲ್ಲವೇ. ಹಾಗಾಗಿ ಬೋಲ್ಡ್ಮ್ಯಾನ್ ರೇಣುಕಾ ಆರಾಮವಾಗಿ ಈ ಗಡಿ ಜಿಲ್ಲಾ ಉಸ್ತುವಾರಿ ವಹಿಸಬಹುದಲ್ಲ.
*********************************************************************
ಜೈಹೊ ಜಯಾ
ಇಂಥ ದಾಷ್ಟ್ರ್ಯ ಕೇವಲ ಡಾ. ಜೆ. ಜಯಲಲಿತಾಗೆ ಮಾತ್ರ ಇರುವುದಕ್ಕೆ ಸಾಧ್ಯ! ಹೆಸರಿನಲ್ಲೇ `ಜಯ' ಹೊಂದಿದ್ದರೂ ಕೆಲವೊಮ್ಮೆ ಅಪಜಯ, ಅಪಕೀತರ್ಿಗಳಿಗೆ ತಲೆಯೊಡ್ಡಿದರೂ ಮತ್ತೆ ಫೀನಿಕ್ಸ್ನಂತೆ ಬೂದಿಯಿಂದ ಮೇಲೆದ್ದು ಬರುವ ತಾಕತ್ತು ತಮಿಳುನಾಡಿನ ಈ ಹಾಲಿ ಮುಖ್ಯಮಂತ್ರಿಗೆ ಮಾತ್ರ ಇರುವ ಹಾಗೆ ಕಾಣಿಸುತ್ತದೆ! ತಮ್ಮ ಪರಮವೈರಿ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಸಕರ್ಾರ ನಿಮರ್ಿಸಿದ್ದ ಶಾಸಕಾಂಗ ಸಭೆಯ ಹೊಸ ಕಟ್ಟಡವನ್ನ ಅದು ಶಾಸನಸಭೆ ಅಧಿವೇಶನ ನಡೆಸಲು ಲಾಯಕ್ಕಾಗಿಲ್ಲ ಎಂಬ ಕಾರಣ ಕೊಟ್ಟು, ಅಲ್ಲಿ ಬಡಜನರಿಗಾಗಿ ಮಲ್ಟಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ನಡೆಸುವುದಾಗಿ ರಾಜ್ಯದ ವಿಧಾನ ಮಂಡಲದ ಅಧಿವೇಶನದಲ್ಲಿ ಘೋಷಿಸಿರುವುದು ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿದೆ. ಶಾಸನಸಭಾ ಕಟ್ಟಡವೆಂದು ಡಿಎಂಕೆ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಇದರ ಉದ್ಘಾಟನೆಯನ್ನು ಧಾಮ್ಧೂಮಾಗಿ ನೆರವೇರಿಸಲಾಗಿತ್ತು. ಅದ್ಯಾವುದನ್ನೂ ಲೆಕ್ಕಕ್ಕೇ ಇಟ್ಟುಕೊಳ್ಳದ ಜಯಾಡಳಿತ ಚೆನ್ನೈ ನಗರದ ಹೃದಯಭಾಗದಲ್ಲಿರುವ ಈ ಬೃಹತ್ ಕಟ್ಟಡವನ್ನು ಸೂಪರ್ಸ್ಷೆಷಾಲಿಟಿ ಆಸ್ಪತ್ರೆಯನ್ನಾಗಿಸುವುದರಿಂದ ಬೇರೆ ಯಾರಿಗಲ್ಲದಿದ್ದರೂ ಬಡವರಿಗಂತೂ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಆಶಯ ಜನತಾ ಜನಾರ್ದನರದ್ದು.
ಗಾಂಧಿ ಟೋಪಿಗೆ ಶುಕ್ರದೆಸೆ!
ಹಳೇ ರಾಜಕಾರಣಿಗಳು ಹಾಗೂ ಶಾಲಾ ಫ್ಯಾನ್ಸಿ ಡ್ರೆಸ್ ಸ್ಪಧರ್ೆಗಳಿಗಷ್ಟೆ ಸೀಮಿತವಾಗಿದ್ದ ಗಾಂಧಿ ಟೋಪಿ ಈಗ ಅಣ್ಣಾ ಹಜಾರೆ ಕಾರಣದಿಂದ ನರ್ಸರಿ ಮಕ್ಕಳಿಂದ ಐಐಟಿ ವಿದ್ಯಾಥರ್ಿಗಳ ವರೆಗೆ ಎಲ್ಲರ ತಲೆಮೇಲೆ ದೇಶದ ಮೂಲೆಮೂಲೆಯಲ್ಲೂ ರಾರಾಜಿಸುತ್ತಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಖಾದಿ ಟೋಪಿಗಳು ಮಾರಾಟವಾಗುತ್ತಿವೆ. ದಿನಕ್ಕೆ 100ರಿಂದ 200 ಟೋಪಿಗಳು ಖರೀದಿಯಾಗುತ್ತಿವೆ ಎನ್ನುವ ಖಾದಿ ಭಂಡಾರದ ಮಾಲಿಕರೊಬ್ಬರ ಪ್ರಕಾರ ಖಾದಿ ಟೋಪಿಗಳ ಬೆಲೆ 40 ರಿಂದ 60 ರೂ ವರೆಗೆ ಇದ್ದರೆ ಇದೇ ರೀತಿಯ ಟೆರಿಕಾಟ್ ಟೋಪಿಗೆ ಕೇವಲ 10 ರೂ. ಇಂಥವು ದಿನಕ್ಕೆ 1500ರಷ್ಟು ಮಾರಾಟವಾಗುತ್ತಿವೆಯಂತೆ! ಒಟ್ಟಿನಲ್ಲಿ ಈಗ ಗಾಂಧಿ ಟೋಪಿಗೆ ಅಣ್ಣಾ ಕಾರಣದಿಂದ ಶುಕ್ರದೆಸೆ! ಎಲ್ಲರ ಟೋಪಿ ಮೇಲೂ `ಮೈ ಅಣ್ಣಾ ಹ್ಞೂಂ'
ಭ್ರಷ್ಟಾಚಾರದ ಬಿಸಿ
ಅಣ್ಣಾ ಹಜಾರೆ ಮಾತೆತ್ತಿದರೆ ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಅನ್ನುತ್ತಾರೆ.. ಅವರೇನು ಮುಸ್ಲಿಮರನ್ನು ನೀವೂ ಬನ್ನಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಕರೆದಿದ್ದಾರೇನು? ಹೀಗಿರುವಾಗ ನೀವೇಕೆ ಈ ಚಳವಳಿಯಲ್ಲಿ ಭಾಗವಹಿಸಬೇಕು? ಅದರ ಅಗತ್ಯವೇನೂ ಇಲ್ಲ ಎಂದು ದೆಹಲಿಯ ಸೈಯದ್ ಇಮಾಮ್ ಬುಖಾರಿ ಹೊರಡಿಸಿದ್ದ ಫಮರ್ಾನಿಗೆ ಆ ಸಮುದಾಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ದೊರೆತಿಲ್ಲದ ಹಾಗೆ ಕಾಣುತ್ತದೆ! ಮಾಜಿ ಶಾಸಕ, ಸಂಸದರಿಂದ ಜನ ಸಾಮಾನ್ಯರ ವರೆಗೆ ನೂರಾರು ಮುಸ್ಲಿಮರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆಯವರ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಅಷ್ಟೇಅಲ್ಲ, ತಾವು ರೋಜಾ(ಉಪವಾಸ) ಮಾಡುತ್ತಿದ್ದರೂ ಅಲ್ಲಿನ ಪಾಕಶಾಲೆಯಲ್ಲಿ ಹಸಿದವರಿಗೆ ಊಟ ಬಡಿಸುವ ಸ್ವಯಂಸೇವಕರಾಗಿ ದುಡಿಯುತ್ತಿದ್ದರಂತೆ! ಭ್ರಷ್ಟಾಚಾರದ ಪಿಡುಗು ಕೋಮು, ಜಾತಿ ನೋಡಿ ಕಾಡುವುದಿಲ್ಲ ಎಂಬುದು ಬಹುಶಃ ಬುಖಾರಿಗೆ ಈಗಲಾದರೂ ಅರ್ಥವಾಗುತ್ತದೋ ಏನೋ!

No comments:
Post a Comment